ತ್ರಿಶೂರ್: ಯಾವುದೇ ಧಾರ್ಮಿಕ ಪಂಡಿತರು ಅಥವಾ ಪ್ರವಾದಿಗಳು ಹತ್ಯೆ ಮತ್ತು ಹಿಂಸೆಯನ್ನು ಬೋಧಿಸಿಲ್ಲ ಎಂದು ಖ್ಯಾತ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ತಿಳಿಸಿದ್ದಾರೆ.
ತ್ರಿಶೂರ್ ತೆಕ್ಕೇಮಠದಲ್ಲಿ ಶಂಕರಪಾದಂ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕೊಲೆ, ಹಿಂಸಾಚಾರ ಮಾಡಿದರೆ ಸ್ವರ್ಗ ಸಿಗುತ್ತದೆ, ಹೂರಿಗಳು(ಸ್ವರ್ಗ ಲಲನೆಯರು) ಬಿರಿಯಾನಿ ಬಡಿಸುತ್ತಾರೆ ಎಂದು ಹೇಳಿಕೊಡುವುದು ತಪ್ಪು.
ಇಂತಹವರನ್ನು ನಿಜವಾದ ಭಕ್ತರು ದೂರ ಇಡಬೇಕು ಎಂದು ಎಂ.ಟಿ. ವಾಸುದೇವನ್ ನಾಯರ್ ಹೇಳಿದರು. ಭಾಷಾ ಕಲಿಕೆಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದು. ತಾನು ಕುಚೇಲವೃತ್ತವನ್ನು ಅಧ್ಯಯನ ಮಾಡಿದಾಗ ಸತ್ಯಾರ್ಥನ್ ಪದದ ಅರ್ಥವನ್ನು ನಿಜವಾಗಿಯೂ ಅರ್ಥಮಾಡಿಕೊಂಡೆ. ಸಾಹಿತ್ಯದಲ್ಲಿ ಪದಗಳು ಸಾಗಿದಾಗ ಓದು ಅರ್ಥಪೂರ್ಣವಾಗುತ್ತದೆ ಎಂದೂ ಎಂಟಿ ವಿವರಿಸಿದರು.
ತ್ರಿಶೂರ್ ತೆಕ್ಕೇಮಠ ಶಂಕರಪದಂ ಪ್ರಶಸ್ತಿ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಸ್ವಾಮಿಯಾರ್ ವಾಸುದೇವಾನಂದ ಬ್ರಹ್ಮಾನಂದಭೂತಿ ಪ್ರದಾನ ಮಾಡಿದರು. ಕೋಟ್ಟಕಲ್ ಆರ್ಯವೈದ್ಯಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪಿ.ಎಂ. ವಾರಿಯರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಪಿ. ವಿಜಯಕೃಷ್ಣನ್, ಡಾ. ಕೆ. ಮುರಳೀಧರನ್, ಪೂರ್ಣಿಮಾ ಸುರೇಶ್, ವಡಕ್ಕುಂಬಾಡ್ ನಾರಾಯಣನ್ ಮತ್ತು ಕುನ್ನಂ ವಿಜಯನ್ ಮಾತನಾಡಿದರು.