ಡೀರ್ ಅಲ್-ಬಾಲಾಹ್ : ಗಾಜಾ ಪಟ್ಟಿಯ ಅಲ್ ಶಿಫಾ ಆಸ್ಪತ್ರೆಯ ನಿರ್ದಿಷ್ಟ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಉಗ್ರರ ನೆಲೆಯನ್ನು ಇಸ್ರೇಲ್ ಪಡೆಗಳು ಪತ್ತೆ ಹಚ್ಚಿವೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಶಿಫಾ ಆಸ್ಪತ್ರೆಗೆ ಮಂಗಳವಾರ ಇಸ್ರೇಲ್ ಪಡೆಗಳು ನುಗ್ಗಿವೆ.
ಆದರೆ, ಇಸ್ರೇಲ್ ಸೈನಿಕರು ಬಂದ ನಂತರ ಆಸ್ಪತ್ರೆಯ ಸಂಕೀರ್ಣದೊಳಗೆ ಯಾವುದೇ ದಾಳಿ ನಡೆದಿಲ್ಲ. ಜತೆಗೆ, ವೈದ್ಯಕೀಯ ಸಿಬ್ಬಂದಿ ಅಥವಾ ರೋಗಿಗಳೊಂದಿಗೆ ಯಾವುದೇ ಘರ್ಷಣೆಯೂ ಆಗಿಲ್ಲ' ಎಂದು ಅವರು ಮಾಹಿತಿ ನೀಡಿದ್ದಾರೆ.
ಹತ್ತಕ್ಕೂ ಹೆಚ್ಚು ಇಸ್ರೇಲ್ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಆಸ್ಪತ್ರೆಯೊಳಗೆ ಬಂದರು. ಯುವಕರನ್ನು ಶರಣಾಗುವಂತೆ ಹೇಳಿದರು ಎಂದು ಸ್ಥಳದಲ್ಲಿದ್ದ ಪತ್ರಕರ್ತರು ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಸೇನೆ ಹಾಗೂ ಹಮಾಸ್ ಬಂಡುಕೋರರ ನಡುವೆ ಕದನ ಮುಂದುವರಿದಿದ್ದು, ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಜನರು ಪ್ರಾಣಭೀತಿಯಿಂದ ಕಾಲ ಕಳೆಯುತ್ತಿದ್ದಾರೆ.