ಕುಂಬಳೆ : ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು, ದೇಆಲಯದ ಜೀರ್ಣೋದ್ಧಾರ ಕಾರ್ಯಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕ್ಲಬ್‍ಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಬೆ ನ. 12ರಂದು ಬೆಳಗ್ಗೆ 9.30ಕ್ಕೆ ದೇವಸ್ಥಾನದಲ್ಲಿ ಜರುಗಲಿರುವುದು.
ಶ್ರೀ ಕೃಷ್ಣನ ಸ್ವಯಂ ಸೇವಾ ಬಂಧುಗಳನ್ನೊಳಗೊಂಡ ತಂಡಗಳು ಒಟ್ಟುಸೇರಿ ಜೀರ್ಣೋದ್ಧಾರ ಕಾಮಗಾರಿ ನೆರವೇರಲಿದ್ದು, ವಿವಿಧ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕುಂಬಳೆ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಕ್ಲಬ್‍ಗಳ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಎಲ್ಲಾ ಕ್ಲಬ್‍ಗಳ ಕನಿಷ್ಠ ಇಬ್ಬರು ಪ್ರಮುಖ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಸಮಿತಿ ಪ್ರಕಟಣೆ ತಿಳಿಸಿದೆ.