ಪಾಲಕ್ಕಾಡ್: ಮನ್ನಾಕ್ರ್ಕಾಡ್ ಉಪಜಿಲ್ಲಾ ಶಾಲಾ ಕಲೋತ್ಸವದ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಘರ್ಷಣೆ ನಡೆದಿದೆ.
ಓವರ್ ಆಲ್ ಚಾಂಪಿಯನ್‍ಶಿಪ್ ಟ್ರೋಫಿಗಳನ್ನು ಘೋಷಿಸಿದ ನಂತರ ಘರ್ಷಣೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ವೇದಿಕೆ ಮೇಲಿದ್ದ ಕುರ್ಚಿ ಮತ್ತಿತರ ವಸ್ತುಗಳನ್ನು ಎಸೆದು ಆತಂಕದ ವಾತಾವರಣ ಸೃಷ್ಟಿಸಿದರು.
ಘರ್ಷಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಾಯಗೊಂಡಿದ್ದಾರೆ. ಕೊನೆಗೆ ಪೋಲೀಸರು ಆಗಮಿಸಿ ಸ್ಥಳವನ್ನು ಶಾಂತಗೊಳಿಸಿದರು. ಮಕ್ಕಳಿಗೆ ಥಳಿಸಿದ ನಾಲ್ವರು ಶಿಕ್ಷಕರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಮನ್ನಾಕ್ರ್ಕಾಡ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.