ಮಾಲೆ: ಭಾರತ ಮತ್ತು ಮಾಲ್ಡೀವ್ಸ್ ಜನರ ಹಿತಾಸಕ್ತಿ ಕಾಪಾಡಲು ಭಾರತೀಯ ಮಿಲಿಟರಿ ವೇದಿಕೆಗಳ ಬಳಕೆಯನ್ನು ಮುಂದುವರಿಸಲು 'ಕಾರ್ಯಸಾಧ್ಯವಾದ ಪರಿಹಾರಗಳನ್ನು' ಕಂಡುಕೊಳ್ಳುವುದಕ್ಕೆ ಮಾಲ್ಡೀವ್ಸ್ ಸರ್ಕಾರ ಒಪ್ಪಿಕೊಂಡಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಮಾಲ್ಡೀವ್ಸ್ ಹೊಸ ಅಧ್ಯಕ್ಷ ಮೊಹಮ್ಮದ್ ನಡುವಿನ ಸಭೆಯ ನಂತರ ಅಧಿಕೃತ ಮೂಲಗಳು ತಿಳಿಸಿವೆ.
ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಸ್ಥಳಾಂತರಿಸುವಿಕೆ, ಮಾದಕವಸ್ತು ಕಳ್ಳಸಾಗಣೆಯನ್ನು ಎದುರಿಸಲು ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನಾ ಸಿಬ್ಬಂದಿ ಅಗತ್ಯತೆ ಕುರಿತು ಸಭೆಯಲ್ಲಿ ಕಿರಣ್ ರಿರಿಜು ಪ್ರಸ್ತಾಪಿಸಿದರು. ಇದಕ್ಕೆ ಕಾರ್ಯಸಾಧ್ಯವಾದ ಪರಿಹಾರ ಕಂಡುಕೊಳ್ಳುವುದಾಗಿ ಮೊಹಮ್ಮದ್ ತಿಳಿಸಿದರು.
ಸಭೆಯಲ್ಲಿ 'ಮಾಲ್ಡೀವ್ಸ್‌ನಿಂದ ತನ್ನ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಮುಯಿಝು ಭಾರತ ಸರ್ಕಾರಕ್ಕೆ ಔಪಚಾರಿಕವಾಗಿ ವಿನಂತಿಸಿದರು' ಎಂದು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಸೇನಾ ಸಿಬ್ಬಂದಿಯನ್ನು ತನ್ನ ದೇಶದಿಂದ ಹೊರಹಾಕುವ ಚುನಾವಣಾ ಭರವಸೆಯನ್ನು ತಾನು ಉಳಿಸಿಕೊಳ್ಳುತ್ತೇನೆ ಎಂದು ಮುಯಿಜ್ಜು ಸಮರ್ಥಿಸಿಕೊಂಡಿದ್ದಾರೆ.
ಆದರೆ ಮಾಲ್ಡೀವಿಯನ್ ನಾಗರಿಕರ ವೈದ್ಯಕೀಯ ಸ್ಥಳಾಂತರಕ್ಕೆ ಭಾರತೀಯ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳ ಕೊಡುಗೆಯನ್ನು ಅಧ್ಯಕ್ಷರು ಒಪ್ಪಿಕೊಂಡರು ಎಂದು ಹೇಳಿದೆ.
ಅಂತರರಾಷ್ಟ್ರೀಯ ಪ್ರವಾಸಿಗರು ಹೆಚ್ಚಾಗಿ ದ್ವೀಪಗಳಲ್ಲಿ ತಂಗುತ್ತಾರೆ. ಇಲ್ಲಿ ಮಾದಕವಸ್ತು ಕಳ್ಳಸಾಗಣೆ ಸಾಮಾನ್ಯ ಎನ್ನುವಂತಾಗಿದ್ದು, ಮೇಲ್ವಿಚಾರಣೆ ಮಾಡುವ ಮತ್ತು ಇದನ್ನು ತಡೆಯುವ ಪಾತ್ರವನ್ನು ಭಾರತೀಯ ಸೇನೆ ಸಮರ್ಪಕವಾಗಿ ನಿಭಾಯಿಸಿದೆ ಎಂದು ಮುಯಿಜ್ಜು ಶ್ಲಾಘಿಸಿದರು ಎಂದು ಮೂಲವೊಂದು ತಿಳಿಸಿದೆ.
' ಮಾಲ್ಡೀವ್ಸ್‌ನ ಜನರ ಹಿತಾಸಕ್ತಿಗಳನ್ನು ಪೂರೈಸುವುದರಿಂದ ಈ ವೇದಿಕೆಗಳ ಬಳಕೆಯ ಮೂಲಕ ನಿರಂತರ ಸಹಕಾರಕ್ಕಾಗಿ ಕಾರ್ಯಸಾಧ್ಯವಾದ ಪರಿಹಾರಗಳನ್ನು ಉಭಯ ಸರ್ಕಾರಗಳು ಚರ್ಚಿಸುತ್ತವೆ ಎಂದು ಒಪ್ಪಿಕೊಳ್ಳಲಾಗಿದೆ' ಎಂದು ಅದು ಹೇಳಿದೆ.
ಭಾರತವು ಮಾಲ್ಡೀವ್ಸ್‌ಗೆ ನೀಡಲಾದ ಡಾರ್ನಿಯರ್ ವಿಮಾನವು 36 ವರ್ಷದ ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗೆಂದು ಡಾರ್ನಿಯರ್ ಏರ್‌ಕ್ರಾಫ್ಟ್ ಮೂಲಕ ಅಟಾಲ್ ಆಸ್ಪತ್ರೆಗೆ ಸಾಗಿಸಲಾಯಿತು. X(ಎಕ್ಸ್) ನಲ್ಲಿ ತಿಳಿಸಿದೆ.