ಕುಂಬಳೆ: ಸುನ್ನೀ ಜಮೀಯ್ಯತುಲ್ ಮುಅಲ್ಲಿಮೀನ್ ಆಯೋಜಿಸಿರುವ ಮದ್ರಸ ಕಲೋತ್ಸವ ಸೀತಾಂಗೋಳಿಯಲ್ಲಿ ಭಾನುವಾರ ಬೆಳಗ್ಗೆ 9ರಿಂದ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.
ಬೆಳಗ್ಗೆ 9 ಕ್ಕೆ ಅಧ್ಯಕ್ಷ ಮೊಯ್ದು ಜಿ.ಎಸ್ ಧ್ವಜಾರೋಹಣ ನೆರವೇರಿಸುವರು. ಸೈಯದ್ ಅಹ್ಮದುಲ್ ಕಬೀರ್ ಜಮಾಲುಲ್ಲಾಹಿ ತಂಙಳ್ ಪ್ರಾರ್ಥನೆ ನೆರವೇರಿಸುವರು. ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷ ಅಶ್ರಫ್ ಸಖಾಫಿ ಎಕೆಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಇಲ್ಯಾಸ್ ಮುಸ್ಲಿಯಾರ್ ಕೊಟುಂಬ ಸಂದೇಶ ಉಪನ್ಯಾಸ ನೀಡಲಿದ್ದಾರೆ. ನಂತರ 20 ಮದರಸಾಗಳಿಂದ ಆಯ್ಕೆಯಾದ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರು ಸ್ಥಳಗಳಲ್ಲಿ ಐದು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ರಾತ್ರಿ 8 ಕ್ಕೆ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಮೊಗ್ರಾಲ್ ರವರ ನೇತೃತ್ವದಲ್ಲಿ ಎಸ್ ಎಸ್ ಎಫ್ ರಾಜ್ಯ ಹಣಕಾಸು ಕಾರ್ಯದರ್ಶಿ ಸೈಯದ್ ಮುನೀರ್ ಅಲ್ ಅಹ್ದಲ್ ಸಮಾರೋಪ ಸಭೆಯನ್ನು ಉದ್ಘಾಟಿಸಲಿದ್ದಾರೆ. ಮೂಸಾ ಸಖಾಫಿ ಕಳತ್ತೂರು ಸಮಾರೋಪ ಭಾಷಣ ಮಾಡುವರು. ಬಿ.ಎಸ್.ಅಬ್ದುಲ್ಲಾ ಕುಂಞÂ್ಞ ಫೈಝಿ ಬಹುಮಾನ ವಿತರಿಸಲಿದ್ದು, ಹನೀಫ್ ಸಅದಿ ಮಂಞಪ್ಪಾರೆ ಕಲಾಪ್ರತಿಭಾ ಪಟ್ಟ ಹಾಗೂ ಬಶೀರ್ ಪುಳ್ಕೂರು ಪ್ರಮಾಣ ಪತ್ರ ವಿತರಿಸುವರು. ಅಬ್ದುಲ್ ರಹ್ಮಾನ್ ಅಹ್ಸನಿ ಮುಹಿಮ್ಮತ್, ಉಮರ್ ಸಖಾಫಿ ಮುಹಿಮ್ಮತ್, ಹನೀಫ್ ಸಅದಿ ಕುಂಬೋಳ್, ಮನ್ಶಾದ್ ಅಹ್ಸನಿ, ಇಬ್ರಾಹಿಂ ಸಖಾಫಿ ಕರ್ನೂರು, ಸುಲೈಮಾನ್ ಕರಿವೆಳ್ಳೂರು, ಅಬ್ದುಲ್ ಖಾದರ್ ಸಅದಿ ಚುಳ್ಳಿಕ್ಕಾನ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಮತ್ತು ಅಶ್ರಫ್ ಸಖಾಫಿ ಉಳುವಾರು ಮಾತನಾಡಲಿದ್ದಾರೆ.
ಉಮರ್ ಸಖಾಫಿ ಕೊಂಬೋದ್, ಸ್ವದಕತುಲ್ಲಾಹ್ ಝುಹ್ರಿ, ಅಬೂಬಕರ್ ಝುಹ್ರಿ, ಬಶೀರ್ ಸಅದಿ ಕಟ್ಟತ್ತಡ್ಕ, ಸಿ.ಎಚ್.ಸಿದ್ದೀಕ್ ಹಿಮಾಮಿ ಸಖಾಫಿ, ಅಲಿ ಅರಫಾ, ಇಬ್ರಾಹಿಂ ಸಅದಿ ಮಾಳಿಗೆ, ಫಾರೂಕ್ ಸಖಾಫಿ ಕರ, ಝುಬೈರ್ ಬಾಡೂರ್, ಹಾಫಿಲ್ ಮಿಕ್ದಾದ್ ಹಿಮಾಮಿ, ಅಬ್ದುಲಾ ಸಖಾಫಿ, ಅಬ್ಬಮ ಸಖಾರ, ಇಮಾನ್ ಸಖಾಫಿ, ಅಯ್ಯೂಬ್ ಇಂದಾಡಿ, ಇಬ್ರಾಹಿಂ ಪಿ, ಹಾರಿಸ್ ಸೀತಾಂಗೋಳಿ, ಅಬ್ದುಲ್ ರೆಹಮಾನ್ ಸಖಾಫಿ ಅಂಬೇರಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಲತೀಫ್ ಸಖಾಫಿ ಮೊಗ್ರಾಲ್, ಅಶ್ರಫ್ ಸಖಾಫಿ ಉಳುವಾರು, ಅಶ್ರಫ್ ಸಖಾಫಿ ಎಕೆಜಿ, ಫೈಸಲ್ ಸಖಾಫಿ, ಅಬ್ದುಲ್ ಖಾದರ್ ಸಅದಿ ಚುಳ್ಳಿಕ್ಕಾನ ಭಾಗವಹಿಸಿದ್ದರು.