HEALTH TIPS

ಸಾಹಿತ್ಯ ಮತ್ತು ಯಕ್ಷಗಾನದಲ್ಲಿ ದಿಗ್ಗಜರ ನಡುವೆ ಸಮದಂಡಿಯಾಗಿ ಮೆರೆಯುತಿದ್ದ ಯು ಬಿ ಗೋವಿಂದಯ್ಯ: ತಾಳಮದ್ದಳೆ ಮತ್ತು ಸಂಸ್ಮರಣ ಸಭೆಯಲ್ಲಿ ಡಾ ಬನಾರಿ

               ಮುಳ್ಳೇರಿಯ: ಸಾಹಿತ್ಯ ಮತ್ತು ಯಕ್ಷಗಾನ ಅರ್ಥಗಾರಿಕೆಯಲ್ಲಿ ಆ ಕಾಲದ ದಿಗ್ಗಜರ ನಡುವೆ ಸಮದಂಡಿಯಾಗಿ ಮೆರಯುತ್ತಿದ್ದ ದಿ. ಯು ಬಿ ಗೋವಿಂದಯ್ಯ ಅವರ ಸಾಧನೆಗಳು ಅನನ್ಯವಾದುದು. ಕೀರಿಕ್ಕಾಡು ಗರಡಿಯಲ್ಲಿ ಪಳಗಿ ಅವರ ಪರಮಾಪ್ತ ಶಿಷ್ಯರಾಗಿದ್ದ ಗೋವಿಂದಯ್ಯರು ಸಂಘದ ಸಕ್ರಿಯ ಸದಸದ್ಯರಾಗಿ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ ಮಹತ್ವದ್ದು ಎಂದು ಖ್ಯಾತ ಸಾಹಿತಿ, ಕಲಾವಿದ ಡಾ. ರಮಾನಂದ ಬನಾರಿ ತಿಳಿಸಿದರು.

                ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕಲಾ ಸಾಹಿತ್ಯ ಸಾಧಕ, ಯು.ಬಿ ಗೋವಿಂದಯ್ಯ ಅವರ ಸಂಸ್ಮರಣೆ-ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

             ಭಾಗವತ ನಾರಾಯಣ ತೋರಣಗಂಡಿ ಅವರು ಗೋವಿಂದಯ್ಯ ಅವರ ಕಲಾವ್ಯಕ್ತಿತ್ವದ  ವೈಶಿಷ್ಟ್ಯ ವಿಶ್ಲೇಶಿಸಿ ಸಂಸ್ಮರಣೆ ಗೈದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಪ್ರತಿಭಾ ವಿದ್ಯಾಲಯದ ಪ್ರಾಂಶುಪಾಲ, ಕಲಾವಿದ ವೆಂಕಟರಾಮ ಭಟ್ಟ ಸುಳ್ಯ ಅವರು ಗೋವಿಂದಯ್ಯ ಅವರ  ಅನುಪಮ ಕೊಡುಗೆಗಳನ್ನು ಕೊಂಡಾಡಿದರು. ಸಂಘದ ಸದಸ್ಯರೂ, ಅರ್ಥಧಾರಿಗಳೂ ಆದ ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ರಮಾನಂದ ರೈ ದೇಲಂಪಾಡಿ ಅವರು ಸಂದರ್ಭೋಚಿತವಾಗಿ ಮಾತಾಡಿದರು.


              ಈ ಕಾರ್ಯಕ್ರಮದ ಮೊದಲಿಗೆ ಬನಾರಿ ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ತಂಡದಿಂದ ಭಜನಾ ಸೇವೆ ನೆರವೇರಿತು, ಸ್ಥಳ ಸಾನ್ನಿಧ್ಯ ಶ್ರೀ ಗೂಪಾಲಕೃಷ್ಣ ದೇವರ ಪೂಜಾರ್ಚನೆಯ ಬಳಿಕ ಯಕ್ಷಗುರು ವಿಶ್ವ ವಿನೋದ ಬನಾರಿಯವರ ನಿರ್ದೇಶನದಲ್ಲಿ ನಾರಾಯಣ ದೇಲಂಪಾಡಿ ಅವರ ಅರ್ಥಸಾಹಿತ್ಯವನ್ನು ಒಳಗೊಂಡ 'ಸಮರ ಸನ್ನಾಹ',ಮತ್ತು 'ಭೀಷ್ಮ ಪರ್ವ' ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.  

             ಭಾಗವತರಾಗಿ ನಿತೀಶ್ ಕುಮಾರ್ ಎಂಕಣಮೂಲೆ ಮತ್ತು ಕುಮಾರಿ ರಚನಾ ಚಿದ್ಗಲ್ ತಮ್ಮ ಸುಮಧುರ ರಾಗ ಸಂಚಾರದಿಂದ  ಹಾಡಿ ರಂಜಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಬಿ.ಹೆಚ್. ಹೊನ್ನಪ್ಪ ಗೌಡ, ಸದಾನಂದ ಮಯ್ಯಾಳ, ನಾರಾಯಣ ಪಾಟಾಳಿ ಮಯ್ಯಾಳ, ಸಹಕರಿಸಿದರು.

           ಅರ್ಥಧಾರಿಗಳಾಗಿ ಡಾ. ರಮಾನಂದ ಬನಾರಿ, ವೆಂಕಟರಾಮ ಭಟ್ಟ ಸುಳ್ಯ,  ರಾಮಣ್ಣ ಮಾಸ್ತರ್ ದೇಲಂಪಾಡಿ, ಶಾಂತಕುಮಾರಿ ದೇಲಂಪಾಡಿ, ನಳಿನಾಕ್ಷಿ ಮುದಿಯಾರು, ಸುಮಲತಾ ಉದಯಕುಮಾರ, ಸರಿತ ಆರ್ ರೈ ಭಾಗವಹಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.  ಶ್ವೇತಾ ರಮೇಶ್ ಬೆಳ್ಳಿಪ್ಪಾಡಿಯವರ ಪ್ರಾರ್ಥಿಸಿದರು. ಯು. ಬಿ. ಶ್ರೀನಿಲಯ ಸ್ವಾಗತಿಸಿದರು.  ನಂದಕಿಶೋರ ಬನಾರಿ ವಂದಿಸಿದರು. ರಾಮಯ್ಯ ರೈ ಕಲ್ಲಡ್ಕ ಗುತ್ತು ದೇಲಂಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries