ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯ ಉದ್ಘಾಟನೆ ಸೋಮವಾರ ನಡೆಯಿತು. ಬದಿಯಡ್ಕ ಗ್ರಾಮಪಂಚಾಯಿತಿ ಮುಂಭಾಗದ ಕಟ್ಟಡದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಎಣ್ಮಕಜೆ ಉದ್ಘಾಟಿಸಿದರು. ಅವರು ಮಾತನಾಡಿ ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾರ್ಯಕರ್ತರೆಲ್ಲರೂ ತಯಾರಾಗಲು ಕರೆಯಿತ್ತರು. ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಯಪಡಿಸಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೇರುವಂತೆ ಮಾಡಬೇಕಾಗಿದೆ. ತಳಮಟ್ಟದ ಕಾರ್ಯಕರ್ತರ ಶ್ರಮವು ನಮ್ಮ ಪಕ್ಷವನ್ನು ಬಲಗೊಳಿಸುತ್ತದೆ ಎಂದರು.
ಮಂಡಲ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ಷಕ ಕಾಂಗ್ರೆಸ್ ಮಂಡಲ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಕಡಾರುಬೀಡು, ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ ಪಿ.ಜಿ., ಕರ್ಷಕ ಕಾಂಗ್ರೆಸ್ ನಿಯೋಜಕ ಮಂಡಲ ಅಧ್ಯಕ್ಷ ತಿರುಪತಿ ಕುಮಾರ್ ಭಟ್. ಮಂಡಲ ಉಪಾಧ್ಯಕ್ಷ ಜಗನಾಥ ರೈ, ಐಎನ್‍ಟಿಯುಸಿ ಮಂಡಲ ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಶಾಫಿ ಗೊಳಿಯಡ್ಕ, ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮ್ಯಾಥ್ಯೂ ಪಳ್ಳತ್ತಡ್ಕ, ಕೆಎಸ್‍ಯು ನೇತಾರ ಜೋಬಿನ್, ನಿರಂಜನ್ ರೈ, ಲೋಹಿತಾಕ್ಷ ನಾಯರ್ ಪಟ್ಟಾಜೆ, ಸುಂದರ ಚುಕ್ಕಿನಡ್ಕ, ವಾಮನ ಚುಕ್ಕಿನಡ್ಕ, ಸುಮಂತು ಸಿರಿಲ್ ಕ್ರಾಸ್ತಾ, ನಾರಾಯಣ ಪುದುಕೋಳಿ ಮೊದಲದವರು ಮಾತನಾಡಿದರು, ಜೊನಿ ಕಾರ್ಮಾರ್ ಸ್ವಾಗತಿಸಿ, ರವಿ ಮೆಣಸಿನಪಾರೆ ವಂದಿಸಿದರು.