ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸಬೇಕು ಎಂದು ಅದು ಸಲಹೆ ನೀಡಿದೆ.
ದೇಶವು ಕೋವಿಡ್‌ನಿಂದ ಬಳಲಿರುವ ಹಿನ್ನೆಲೆಯಲ್ಲಿ ಅದನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕೃತ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ತಿಳಿಸಲಾಗಿದೆ.
ಶೀತ ಜ್ವರ, ಉಸಿರಾಟ ಸಮಸ್ಯೆಗಳ ಬಗ್ಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ಮೈಕೋಪ್ಲಾಸ್ಮಾ ನ್ಯುಮೋನಿಯಾ, ಕೋವಿಡ್ ಸೋಂಕಿನಿಂದ ಬಳಲಿದವರಲ್ಲಿ ಉಸಿರಾಟದ ಕಾಯಿಲೆಗಳು ಹೆಚ್ಚಾಗಿದ್ದು, ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಸೋಂಕು ಇಲ್ಲ
ಈ ಮಧ್ಯೆ, ಚೀನಾದಲ್ಲಿ ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆಗೆ ಚೀನಾ ತಿಳಿಸಿದೆ.
ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿದ ನಂತರದ ಪ್ರಥಮ ಚಳಿಗಾಲ ಪ್ರವೇಶಿಸಿದ ಹಿಂದೆಯೇ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಏರಿಕೆಯಾಗಿವೆ. ಮುಖ್ಯವಾಗಿ ಬೀಜಿಂಗ್, ಲಯೊನಿಂಗ್ ಪ್ರಾಂತ್ಯದಲ್ಲಿ ತೀವ್ರವಾಗಿದ್ದು, ಆಸ್ಪತ್ರೆಗಳಲ್ಲಿ ಉದ್ದನೆಯ ಸಾಲು ಇದೆ.
ಚಳಿಗಾಲ ಮತ್ತು ವಸಂತಕಾಲದಲ್ಲಿ ಮಕ್ಕಳಲ್ಲಿ ಸೋಂಕು, ಜ್ವರದ ಸಮಸ್ಯೆಗಳು ಹೆಚ್ಚಾಗಬಹುದು. ಭವಿಷ್ಯದಲ್ಲಿ ಕೆಲವು ಕಡೆ ಶ್ವಾಸಕೋಶವನ್ನು ಬಾಧಿಸುವ ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೋಂಕು ಹೆಚ್ಚಾಗಬಹುದು. ಅಲ್ಲದೆ, ಕೋವಿಡ್ ಸೋಂಕು ಮತ್ತೆ ಕಾಡುವ ಸಾಧ್ಯತೆಗಳು ಇವೆ ಎಂದು ರಾಜ್ಯ ಮಂಡಳಿ ಜನತೆಗೆ ಎಚ್ಚರಿಕೆ ನೀಡಿದೆ.