ಎರ್ನಾಕುಳಂ: ನೆಡುಂಬಸ್ಸೆರಿಯಲ್ಲಿ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ.
ಕರ್ನಾಟಕ ಮೂಲದ ರಾಮೋಜಿ ಮತ್ತು ರಮೇಶ್ ಕುಮಾರ್ ಬಂಧಿತರು. ನಿನ್ನೆ ರಾತ್ರಿ ಬೆಂಗಳೂರಿಗೆ ಹೊರಟಿದ್ದ ಅಲಯನ್ಸ್ ಏರ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಕೊಲ್ಲಿಯಿಂದ ವಿಮಾನ ಟೇಕಾಫ್ ಆಗುತ್ತಿರುವಾಗ ಇಬ್ಬರು ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದಾರೆ.
ತಪ್ಪಾಗಿದೆ ಎಂದವರು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಪೋಲೀಸರ ವಶಕ್ಕೆ ನೀಡಲಾಗಿದೆ. ತುರ್ತು ಬಾಗಿಲು ತಪ್ಪಾಗಿ ತೆರೆದಿದ್ದೇವೆ ಎಂದು ಅವರು ಹೇಳುತ್ತಾರೆ. ಘಟನೆ ಕುರಿತು ಪೆÇಲೀಸರು ತನಿಖೆ ಆರಂಭಿಸಿದ್ದಾರೆ.