ಚಂಡೀಗಢ: ಪಾಕಿಸ್ತಾನದ ಐಎಸ್‌ಐ ನಿಯಂತ್ರಣದಲ್ಲಿರುವ ಭಯೋತ್ಪಾದಕ ಸಂಘಟನೆಯ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಚಂಡೀಗಢ: ಪಾಕಿಸ್ತಾನದ ಐಎಸ್‌ಐ ನಿಯಂತ್ರಣದಲ್ಲಿರುವ ಭಯೋತ್ಪಾದಕ ಸಂಘಟನೆಯ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಬಟಿಂಡಾದ ದಿಖ್ ಗ್ರಾಮದ ರಾಜ್‌ಭೂಪಿಂದರ್ ಸಿಂಗ್ ಅಲಿಯಾಸ್ ಭಿಂದಾ, ಫಾಜಿಲ್ಕಾದ ರಮಣ್ ಕುಮಾರ್ ಮತ್ತು ಕೋಟ್ಕಾಪುರದ ಜಗಜೀತ್ ಸಿಂಗ್ ಬಂಧಿತರು.
ಇವರಿಂದ ಎಂಟು ಪಿಸ್ತೂಲ್, ಮ್ಯಾಗಜಿನ್ ಮತ್ತು 30 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಬುಧವಾರ ತಿಳಿಸಿದ್ದಾರೆ.
ಬಂಧಿತರು ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮತ್ತು ಕೆಲವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದೂ ಆರೋಪಿಸಿದ್ದಾರೆ.
ಗುಪ್ತಚರ ಇಲಾಖೆಯ ಮಾಹಿತಿಯ ಅನ್ವಯ ಪೊಲೀಸರು ಬಟಿಂಡಾದ ಗೋವಿಂದಪುರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಈ ಮೂವರನ್ನು ಬಂಧಿಸಿದ್ದಾರೆ ಎಂದು ವಿವರಿಸಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿ ಶಿಕ್ಷೆಗೊಳಗಾಗಿ ಸಂಗ್ರೂರ್ ಕಾರಾಗೃಹದಲ್ಲಿರುವ ಕೆಲವರ ಜೊತೆ ಬಂಧಿತರಿಗೆ ಸಂಪರ್ಕವಿದೆ. ಇವರು ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತಂದಿದ್ದರು ಎಂದಿದ್ದಾರೆ.