ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ.
ಅಕ್ಷತೆ ಪೂಜೆಯ ಮೂಲಕ ಪ್ರತಿಷ್ಠಾಪನೆ ಪ್ರಕ್ರಿಯೆಗಳ ತಯಾರಿಗೆ ಇಂದು ಚಾಲನೆ ದೊರೆತಿದೆ.
ರಾಮ ದರ್ಬಾರ್ ನಲ್ಲಿ 100 ಕ್ವಿಂಟಾಲ್ ನಷ್ಟು ಅಕ್ಷತೆಗೆ ಪೂಜೆ ಸಲ್ಲಿಸಲಾಗಿದ್ದು, ಅಕ್ಕಿಗೆ ಅರಿಶಿನ ಹಾಗೂ ದೇಸಿ ತುಪ್ಪ ಮಿಶ್ರಣ ಮಾಡುವ ಮೂಲಕ ಅಕ್ಷತೆಯನ್ನು ತಯಾರಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ದೇಶದ 45 ಸಂಘಟನಾ ಪ್ರಾಂತ್ಯಗಳಿಂದ ಅಯೋಧ್ಯೆಗೆ ಆಗಮಿಸಿರುವ 90 ಪ್ರಮುಖ ಪದಾಧಿಕಾರಿಗಳಿಗೆ ಈ ಅಕ್ಷೆತೆಯನ್ನು ವಿತರಣೆ ಮಾಡಲಾಗುತ್ತದೆ.
ಬಳಿಕ ವಿಹೆಚ್ ಪಿಯ ಸದಸ್ಯರು ಈ ಅಕ್ಷತೆಯನ್ನು ಜ.22ಕ್ಕೂ ಮುನ್ನ ದೇಶಾದ್ಯಂತ ವಿತರಣೆ ಮಾಡಲಿದ್ದಾರೆ.