ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ದಿನಾಚರಣೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ.ಎಂ.ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು.
ಬಿ.ಆರ್.ಸಿ ತರಬೇತುದಾರ ಸುಮಾದೇವಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮಕ್ಕಳಿಂದ ಭಾಷಣ, ಅಭಿನಯ ಗೀತೆ,ಸಮೂಹ ಗಾನ, ರಸಪ್ರಶ್ನೆ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ಅಧ್ಯಾಪಿಕೆಯರಾದ ಜಸೀಲ ಹಾಗು ಸುಮಾದೇವಿ ಹಾಡು ಹಾಡುವ ಮೂಲಕ ಮಕ್ಕಳನ್ನು ಮನರಂಜಿಸಿದರು. ಧನ್ಯ ಟೀಚರ್ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು.ಅಧ್ಯಾಪಕರಾದ ಅಬ್ದುಲ್ ಬಶೀರ್ ಕುಂಡೇರಿ ಸ್ವಾಗತಿಸಿ,ಫಝೀನ ಟೀಚರ್ ವಂದಿಸಿದರು.