ರಾಂಚಿ: ಕಾರ್ಯಾಚರಣೆ ಸ್ಥಗಿತಗೊಳಿಸಿರುವ, ಮಿಗ್-211 ಯುದ್ಧವಿಮಾನವನ್ನು ಇಲ್ಲಿನ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅನಾವರಣಗೊಳಿಸಿದರು.
ರಾಂಚಿ: ಕಾರ್ಯಾಚರಣೆ ಸ್ಥಗಿತಗೊಳಿಸಿರುವ, ಮಿಗ್-211 ಯುದ್ಧವಿಮಾನವನ್ನು ಇಲ್ಲಿನ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅನಾವರಣಗೊಳಿಸಿದರು.
ಈ ಯುದ್ಧವಿಮಾನವನ್ನು, ಬಾಂಗ್ಲಾದೇಶ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಬಳಸಲಾಗಿತ್ತು.
'ನಿಷ್ಕ್ರಿಯಗೊಳಿಸಿರುವ ಮಿಗ್-211 ಯುದ್ಧವಿಮಾನವನ್ನು ಪ್ರಧಾನಿ ಮೋದಿ ರಾಜಭವನ ಆವರಣದಲ್ಲಿ ಅನಾವರಣಗೊಳಿಸಿದ್ದಾರೆ.
ನಮನ: ಇದಕ್ಕೂ ಮುನ್ನ, ಬುಡಕಟ್ಟು ಜನಾಂಗದ ಹೋರಾಟಗಾರ ಬಿರ್ಸಾ ಮುಂಡಾ ಅವರ ಹುಟ್ಟೂರು, ಖೂಂಟಿ ಜಿಲ್ಲೆಯಲ್ಲಿರುವ ಉಲಿಹಾತು ಗ್ರಾಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮುಂಡಾ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಮುಂಡಾ ಅವರ ಜನ್ಮದಿನವನ್ನು ಜನಜಾತೀಯ ಗೌರವ ದಿನವನ್ನಾಗಿ ಆಚರಿಸಲಾಗುತ್ತಿದೆ.