ಇಂದೋರ್: ವಿಧಾನಸಭೆ ಚುನಾವಣೆ ಹಿನ್ನೆಲೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಾಂಗ್ರೆಸ್ ರ‍್ಯಾಲಿ ಹಮ್ಮಿಕೊಂಡಿತ್ತು. ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ವೇದಿಕೆ ಮೇಲೆ ಹೂವುಗಳಿಲ್ಲದ ಗುಚ್ಛ ನೀಡಿ ಸ್ವಾಗತಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತರೊಬ್ಬರು ವೇದಿಕೆ ಮೇಲಿದ್ದ ಪ್ರಿಯಾಂಕಾ ಅವರನ್ನು ಸ್ವಾಗತಿಸಲು ಗುಚ್ಛ ನೀಡಿದ್ದಾರೆ. ಆದರೆ ಅದರಲ್ಲಿ ಹೂವುಗಳೇ ಇರಲಿಲ್ಲ. ಖಾಲಿ ಗುಚ್ಛ ನೋಡಿ ಪ್ರಿಯಾಂಕಾ ನಕ್ಕು ಹೂವುಗಳೆಲ್ಲಿವೆ ಎಂದು ಕೇಳಿ ಟೇಬಲ್ ಮೇಲೆ ಇರಿಸಿದ್ದಾರೆ. ಇತ್ತ ಹೂವುಗಳಿಲ್ಲದ ಗುಚ್ಛ ನೀಡಿದ್ದನ್ನು ಅರಿತ ಕಾರ್ಯಕರ್ತ ಗೊಂದಲಕ್ಕೀಡಾಗಿ ಹೂವುಗಳನ್ನು ತರಲು ತಡವರಿಸಿದ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.
ಈ ವಿಡಿಯೊವನ್ನು ಉತ್ತರ ಪ್ರದೇಶ ರಾಜ್ಯದ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ನವೆಂಬರ್ 17 ರಂದು ಮಧ್ಯಪ್ರದೇಶಲ್ಲಿ ಚುನಾವಣೆ ನಡೆಯಲಿದೆ. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೂ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಬಂಡಾಯದ ನಂತರ ಅಧಿಕಾರವನ್ನು ಕಳೆದುಕೊಂಡಿತ್ತು. ಬಳಿಕ ಬಿಜೆಪಿ ಆಡಳಿತ ಆರಂಭಿಸಿತ್ತು. ಈ ಬಾರಿ ಗೆಲ್ಲಲೇಬೇಕೆಂಬ ಪಣ ತೊಟ್ಟ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದೆ.