ಕಾಸರಗೋಡು: ಕೇರಳ ಕೃಷಿ ಕಾರ್ಮಿಕರ ಕಲ್ಯಾಣ ನಿಧಿ ಮಂಡಳಿಯಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಪಾವತಿಸದೆ ಸದಸ್ಯತ್ವ ಕಳೆದುಕೊಂಡವರಿಗೆ ಬಾಕಿ ಪಾವತಿಸಿ ಸದಸ್ಯತ್ವವನ್ನು ಮರುಸ್ಥಾಪಿಸಲು, ಭತ್ಯೆ ಪಾವತಿಸಲು, ಹೊಸ ಸದಸ್ಯರನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ.
ಕೊಳತ್ತೂರು ಗ್ರಾಮದಲ್ಲಿರುವವರಿಗೆ ಪೆರ್ಲಡ್ಕ ಇ.ಎಂ.ಎಸ್ ಗ್ರಂಥಾಲಯದಲ್ಲಿ ನ. 22ರಂದು ಬೆಳಗ್ಗೆ 11ಕ್ಕೆ ಅದಾಲತ್ ನಡೆಯಲಿದೆ. ಬಾಕಿ ಪಾವತಿಸಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅದಾಲತ್‍ಗೆ ಬರಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2207731, 9847471144)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.