ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ 39ನೇ ಪುಣ್ಯಸ್ಮರಣೆ ಬದಿಯಡ್ಕ ಮಂಡಲ ಕಾರ್ಯಾಲಯದಲ್ಲಿ ನಡೆಯಿತು.
ಹಿರಿಯ ಕಾಂಗ್ರೆಸ್ ನೇತಾರ ಪಿ.ಜಿ. ಚಂದ್ರಹಾಸ ರೈ ಪುಷ್ಪಾರ್ಚನೆಗೆಗೈದು ಮಾತನಾಡಿದರು. ಇಂದಿರಾ ಗಾಂಧಿ ದಕ್ಷ ಆಡಳಿತ ಇಡೀ ವಿಶ್ವಕ್ಕೆ ಮಾದರಿ. ವಿಶ್ವ ರಾಷ್ಟ್ರಗಳು ಇಂದಿರಾ ಗಾಂಧಿಯ ಆಡಳಿತವನ್ನು ಮೆಚ್ಚಿತ್ತು. ಉಕ್ಕಿನ ಮಹಿಳೆಯಾಗಿ ರಾಷ್ಟ್ರಾಭ್ಯುದಯದಲ್ಲಿ ಅವರ ಕೊಡುಗೆ ಮಹತ್ತರವಾದುದು ಎಂದರು.
ಮಂಡಲ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ತಿರುಪತಿ ಕುಮಾರ್ ಭಟ್, ಜಗನ್ನಾಥ ರೈ ಪಿ.ಜಿ., ಚಂದ್ರಹಾಸ ಮಾಸ್ತರ್, ಶಾಫಿ ಗೋಳಿಯಡ್ಕ, ಕುಮಾರನ್ ನಾಯರ್, ಪ್ರಕಾಶ್ ಶೆಟ್ಟಿ ಕಡಾರು, ಸಿರಿಲ್ ಡಿಸೋಜ, ಗೋಪಾಲ ದರ್ಬೆತ್ತಡ್ಕ, ಐತಪ್ಪ ಪಟ್ಟಾಜೆ, ಶಾಫಿ ಬದಿಯಡ್ಕ, ಯುವ ಕಾಂಗ್ರೆಸ್ ಕಾರ್ಯಕರ್ತರು, ಪೋಷಕ ಸಂಘಟನೆಯ ನೇತಾರರು, ಕಾರ್ಯಕರ್ತರು ಭಾಗವಹಿಸಿದ್ದರು.