ಕಾಸರಗೋಡು: ಮುರು ದಿವಸಗಳ ಕಾಲ ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಂಪನ್ನಗೊಂಡಿತು.
ದೆಹಲಿಯ ಅಮೇರಿಕನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಿರ್ದೇಶಕ ಡಾ.ಪುರುಷೋತ್ತಮ ಬಿಳಿಮಲೆ ಸಮರೋಪ ಭಾಷಣ ಮಾಡಿದರು. ಕಾಲೇಜು ಪ್ರಾಂಶುಪಾಲಡಾ.ಅನಿಲ್ ಕುಮಾರ್ ವಿ.ಎಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ಬಹುಭಾಷಾ ಸಂಸ್ಕøತಿಯ ಅಧ್ಯಯನಗಳಿಗೆ ಇಂತಹ ಸಮಾವೇಶ ಪ್ರೇರಣೆಯಾಗಲಿ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾಸರಗೋಡಿನ ಸಾಂಸ್ಕøತಿಕ ವೈವಿಧ್ಯತೆಗೆ ಸಮಾವೇಶ ಸಾಕ್ಷಿಯಾಗಿದೆ. ಇಂತಹ ಸಮಾವೇಶಗಳು ಅಲಕ್ಷಿತ ಭಾಷೆ, ಸಂಸ್ಕøತಿಯ ಪನರುಜ್ಜೀವನಕ್ಕೆ ಕಾರಣವಾಗಬೇಕು ಎಂದು ಆಶಿಸಿದರು.
ಡಾ.ಕೆ.ಕಮಲಾಕ್ಷ ಅವರು ಉಪಸ್ಥಿತರಿದ್ದರು. ಸಮಾವೇಶದಲ್ಲಿಪ್ರಬಂಧ ಮಂಡಿಸಿದ ಹತ್ತು ಮಂದಿ ಸಂಶೋಧಕ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರೊ.ಸುಬ್ರಾಯ ಭಟ್ ಸ್ಮಾರಕ ಪುರಸ್ಕಾರ ವಿತರಿಸಲಾಯಿತು. ಸಮಾವೇಶದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಾಂಶುಪಾಲರು ಪ್ರಮಾಣಪತ್ರ ವಿತರಿಸಿದರು. ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತ ಎಸ್ ಸ್ವಾಗತಿಸಿದರು. ಸಮಾವೇಶದ ಸಂಯೋಜಕ ಡಾ.ಬಾಲಕೃಷ್ಣ ಹೊಸಂಗಡಿ ವಂದಿಸಿದರು.