ರಾಯಬರೇಲಿ: 'ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂಬುದರಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿದೆ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ' ಎಂದು 'ಒಂದು ದೇಶ, ಒಂದು ಚುನಾವಣೆ'ಯ ಸಾಧ್ಯತೆಯನ್ನು ಅನ್ವೇಷಿಸುವ ಸಮಿತಿಯ ಮುಖ್ಯಸ್ಥ ರಾಮನಾಥ್ ಕೋವಿಂದ್ ಹೇಳಿದರು.

'ಇದರಿಂದ ಜನರಿಗೆ ಅನುಕೂಲವಾಗಲಿದೆ. ಉಳಿದ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುವುದು' ಎಂದು ಅವರು ತಿಳಿಸಿದರು.
ಸಂಸದೀಯ ಸಮಿತಿ, ನೀತಿ ಆಯೋಗ, ಚುನಾವಣಾ ಆಯೋಗವು ಸೇರಿದಂತೆ ಹಲವು ಸಮಿತಿಗಳು 'ಒಂದು ದೇಶ, ಒಂದು ಚುನಾವಣೆ'ಯ ಸಂಪ್ರದಾಯವನ್ನು ದೇಶದಲ್ಲಿ ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಹೇಳಿವೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಬೇಕು' ಎಂದು ಮನವಿ ಮಾಡಿಕೊಳ್ಳುವೆ ಎಂದರು.
'ಇದರ ಸಾಕಾರಕ್ಕಾಗಿಯೇ ಕೇಂದ್ರ ಸರ್ಕಾರ ನನ್ನ ನೇತೃತ್ವದಲ್ಲಿ ಸಮಿತಿ ರಚಿಸಿದೆ. ನಾವು ಜನರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದ್ದು, ಸಲಹೆ ನೀಡುವಂತೆ ಕೋರಿದ್ದೇನೆ. ಎಲ್ಲರ ಬೆಂಬಲ ಸಿಕ್ಕಿದೆ. ಈ ಸಂಪ್ರದಾಯವನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡುವೆ' ಎಂದು ಅವರು ಹೇಳಿದರು.
'ಒಂದು ದೇಶ, ಒಂದು ಚುನಾವಣೆ'ಯು ಜಾರಿಗೊಂಡರೆ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಪ್ರಯೋಜನವಾಗಲ್ಲ ಎಂದು ಪ್ರತಿಪಾದಿಸಿದ ಕೋವಿಂದ್, 'ಕೇಂದ್ರದ ಚುಕ್ಕಾಣಿ ಹಿಡಿಯಲು ಎಲ್ಲ ಪಕ್ಷಕ್ಕೂ ಇದು ಸಹಕಾರಿಯಾಗಲಿದೆ. ಇದರಲ್ಲಿ ಯಾವುದೇ ತಾರತಮ್ಯವಾಗಲ್ಲ' ಎಂದರು.