ವಾಷಿಂಗ್ಟನ್: ನ್ಯೂ ಪ್ಯೂ ಸಂಶೋಧನಾ ಕೇಂದ್ರದ ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಸುಮಾರು 725,000 ಅಕ್ರಮ ಭಾರತೀಯ ವಲಸೆಗಾರರಿದ್ದು, ಮೆಕ್ಸಿಕೋ ಮತ್ತು ಎಲ್ ಸಾಲ್ವಡಾರ್ ನಂತರ ಮೂರನೇ ಅತಿ ದೊಡ್ಡ ಅಕ್ರಮ ವಲಸಿಗರಾಗಿದ್ದಾರೆ.
2021 ರ ಹೊತ್ತಿಗೆ, ದೇಶದ 10.5 ಮಿಲಿಯನ್ ಅನಧಿಕೃತ ವಲಸಿಗರಿದ್ದಾರೆ. ಇದು ಅಮೆರಿಕದ ಒಟ್ಟು ಜನಸಂಖ್ಯೆಯ ಸುಮಾರು ಶೇ. 3ರಷ್ಟು ಮತ್ತು ವಿದೇಶದಲ್ಲಿ ಜನಿಸಿದ ಜನಸಂಖ್ಯೆಯ ಶೇ. 22 ರಷ್ಟು ಪ್ರತಿನಿಧಿಸುತ್ತಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಥಿಂಕ್ ಟ್ಯಾಂಕ್ ಹೇಳಿದೆ.
2007 ರಿಂದ 2021 ರವರೆಗೆ ಅಮೆರಿಕದಲ್ಲಿ ಅನಧಿಕೃತ ವಲಸಿಗರ ಸಂಖ್ಯೆಯಲ್ಲಿ ಪ್ರಪಂಚದ ಪ್ರತಿಯೊಂದು ಪ್ರದೇಶ ಗಮನಾರ್ಹ ಹೆಚ್ಚಳ ಹೊಂದಿದ್ದು, ಮಧ್ಯ ಅಮೇರಿಕಾ (240,000) ಮತ್ತು ದಕ್ಷಿಣ ಮತ್ತು ಪೂರ್ವ ಏಷ್ಯಾದಿಂದ (180,000) ಅತಿ ಹೆಚ್ಚು ಅಕ್ರಮ ವಲಸಿಗರಿದ್ದಾರೆ.
2021ರಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಮೆಕ್ಸಿಕೋದ ಅನಧಿಕೃತ ವಲಸಿಗರ ಸಂಖ್ಯೆಯಲ್ಲಿ 4.1 ಮಿಲಿಯನ್ ಆಗಿದೆ. , ಎಲ್ ಸಾಲ್ವಡಾರ್ ನ 800,000 ವಲಸಿಗರು ಮತ್ತು 725,000 ಅಕ್ರಮ ವಲಸಿಗರೊಂದಿಗೆ ಭಾರತವು ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ ಎಂದು ವರದಿ ಹೇಳಿದೆ.
ಅಮೆರಿಕದಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ದೇಶಗಳ ಪೈಕಿಯಲ್ಲಿ ಭಾರತ, ಬ್ರೆಜಿಲ್, ಕೆನಡಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದಾಗಿ ವರದಿ ತಿಳಿಸಿದೆ.