ಗುವಹಾತಿ: ಭೂತಾನ್ ದೊರೆ ಜಿಗ್ಮೆ ಖೆಸರ್ ನಾಮಗ್ಯಾಲ್ ವಾಂಗಚುಕ್ ಅವರು ತಮ್ಮ ನಾಲ್ಕು ದಿನಗಳ ಭೇಟಿಗಾಗಿ ಅಸ್ಸಾಂಗೆ ಬಂದಿದ್ದು, ಇಲ್ಲಿನ ಲೋಕಪ್ರಿಯ ಗೋಪಿನಾಥ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

43 ವರ್ಷದ ಭೂತಾನ್ ದೊರೆ ರಾಜ್ಯದ ನೀಲ್‌ಚಲ್ ಪರ್ವತದ ಮೇಲಿರುವ ಕಾಮಾಕ್ಯ ಮಂದಿರ, ಒಂದು ಕೊಂಬಿನ ಖಡ್ಗಮೃಗಕ್ಕೆ ಹೆಸರುವಾಸಿಯಾದ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲಿದ್ದಾರೆ.
ಅಸ್ಸಾಂಗೆ ಬಂದಿಳಿದ ವಾಂಗಚುಕ್ ಅವರಿಗೆ ಅಸ್ಸಾಂನ ಸಾಂಪ್ರದಾಯಿಕ ಶಾಲು ಗೆಮೊಚಾವನ್ನು ನೀಡಿ ಶರ್ಮಾ ಸ್ವಾಗತಿಸಿದರು.
ಶುಕ್ರವಾರ ಸಂಜೆ ವಾಂಗಚುಕ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಮಾತುಕತೆ ನಡೆಸಲಿದ್ದಾರೆ. ರಾಜ್ಯಪಾಲ ಗುಲಾಬ್ ಚಂದ್ ಕಠಾರಿಯಾ ಅವರು ದೊರೆಗಾಗಿ ಔತಣಕೂಟ ಆಯೋಜಿಸಿದ್ದಾರೆ. ಜೋರತ್ ಮೂಲಕ ವಾಂಗಚುಕ್ ಅವರು ಭಾನುವಾರ ದೆಹಲಿಗೆ ಪ್ರಯಾಣಿಸಲಿದ್ದಾರೆ.
'ಭೂತಾನ್ ದೊರೆಯ ಈ ಭೇಟಿ ಮೂಲಕ ಎರಡೂ ರಾಷ್ಟ್ರಗಳ ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿದೆ' ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭೂತಾನ್ ದೊರೆಯ ಭೇಟಿಯ ಸಂದರ್ಭದಲ್ಲೇ ಅಲ್ಲಿನ ಮೂವರು ವಿದ್ಯಾರ್ಥಿಗಳಿಗೆ ರಾಜ್ಯದ ಎರಡು ವೈದ್ಯಕೀಯ ಕಾಲೇಜಿನಲ್ಲಿ ರಾಜ್ಯ ಸರ್ಕಾರ ಪ್ರವೇಶ ನೀಡಿದೆ.
ಭಾರತದೊಂದಿಗೆ ಭೂತಾನ್ 649 ಕಿ.ಮೀ. ಉದ್ದದ ಗಡಿ ಹೊಂದಿದೆ. ಇದರಲ್ಲಿ 267 ಕಿ.ಮೀ. ಅಸ್ಸಾಂ ಪ್ರದೇಶದಲ್ಲೇ ಇದೆ.