ಕಾಸರಗೋಡು: ನವಕೇರಳ ಸದಸ್ ಪ್ರಚಾರಾರ್ಥ ಕಾಸರಗೋಡು ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಫುಟ್ಬಾಲ್ ಗೋಲು ಹೊಡೆಯುವ ಮೇಳ ಆಯೋಜಿಸಲಾಯಿತು.
ಜಿಲ್ಲಾಧಿಕಾರಿ ಸಭಾಂಗಣದ ಸನಿಹ ಸಿದ್ಧಪಡಿಸಲಾಗಿದ್ದ ಗೋಲ್ ಪೆÇೀಸ್ಟ್‍ಗೆ ಚೆಂಡನ್ನು ಕಾಲಿಮದ ಒದೆಯುವ ಮೂಲಕ ಕೇರಳ ಸ್ಟೇಟ್ ಸ್ಪೋಟ್ಸ್ ಕೌನ್ಸಿಲ್ ಅಧ್ಯಕ್ಷ ಯು. ಶರಫಲಿ ಕಾರ್ಯಕ್ರಮ ಉದ್ಘಾಟಿಸಿದರು. ನವಕೇರಳ ಸದಸ್‍ಗೆ ಎಲ್ಲ ಸತರದ ಜನತೆಯ ಸಹಕಾರ ಅಗತ್ಯವಿದ್ದು, ಜನರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸುವ ಜವಾಬ್‍ದಾರಿ ನಮ್ಮೆಲ್ಲರ ಮೇಲಿರುವುದಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದರು.
ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ.ಹಬೀಬ್ ರಹಮಾನ್, ಅಸಿಸ್ಟೆಂಟ್ ಟ್ರೆಷರಿ ಆಫೀಸರ್ ಗಫೂರ್ ಗೋಲು ಬಾರಿಸಿದರು. ಕೇರಳ ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಪ್ರತಿನಿಧಿ ಟಿ.ವಿ.ಬಾಲನ್, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಸೆಕ್ರೆಟರಿ ಕೆ.ವಿ.ಸುರೇಂದ್ರನ್, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಉಪಾಧ್ಯಕ್ಷ ಪಿ.ಪಿ.ಅಶೋಕನ್, ಸ್ಪೋಟ್ರ್ಸ್ ಕೌನ್ಸಿಲ್ ಎಕ್ಸಿಕ್ಯೂಟಿವ್ ಸದಸ್ಯರು, ಕಲೆಕ್ಟರೇಟ್ ಸಿಬ್ಬಂದಿ, ನಾಯಮರ್‍ಮೂಲೆ ಟಿ.ಐ.ಎಚ್.ಎಸ್. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ನವೆಂಬರ್ 18ಮತ್ತು 19ರಂದು ಜಿಲ್ಲೆಯಲ್ಲಿ ನವಕೇರಳ ಸದಸ್ ನಡೆಯಲಿರುವುದು.