ತಿರುವನಂತಪುರಂ: ಖಾಸಗಿ ಹಣ ವರ್ಗಾವಣೆ ಸಂಸ್ಥೆಗಳಲ್ಲಿ ಹೂಡಿಕೆ ಮಾಡದಂತೆ ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ಅಗತ್ಯ ದಾಖಲೆಗಳನ್ನು ನವೀಕರಿಸದೆ ಕಾರ್ಯನಿರ್ವಹಿಸುವ ಹಣ ವರ್ಗಾವಣೆ ಸಂಸ್ಥೆಗಳಲ್ಲಿ ಹೂಡಿಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಇಂತಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕ ವಂಚನೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಎಡಿಜಿಪಿ ಮನವಿ ಮಾಡಿರುವÀರು. ಇತ್ತೀಚೆಗೆ ಹೆಚ್ಚುತ್ತಿರುವ ಆರ್ಥಿಕ ವಂಚನೆಗಳ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಅಂತಹ ಸಂಸ್ಥೆಗಳ ವಿವರಗಳನ್ನು ಕೇರಳ ಪೋಲೀಸ್ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ವಿವರವಾದ ಮಾಹಿತಿಗಾಗಿ ವೆಬ್‍ಸೈಟ್ಚಿ https://keralapolice.gov.in/page/announcement ಗೆ ಭೇಟಿ ನೀಡಬಹುದು.