ತಿರುವನಂತಪುರಂ: ಬಿಪಿಎಲ್ ವರ್ಗದವರು ಆರ್‍ಟಿಐ ದಾಖಲೆಗಳನ್ನು ಉಚಿತವಾಗಿ ಪಡೆಯಲು ಸ್ಥಳೀಯಾಡಳಿತ ಇಲಾಖೆಯ ಕಾರ್ಯದರ್ಶಿಯವರ ಪ್ರಮಾಣಪತ್ರ ಸಾಕು ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗ ಹೇಳಿದೆ.
ಆಯುಕ್ತ ಎ ಅಬ್ದುಲ್ ಹಕೀಂ ಮಾತನಾಡಿ, ಬಿಪಿಎಲ್ ವರ್ಗದವರು ನಿಯಮ 4(4)ರ ಅಡಿಯಲ್ಲಿ ದಾಖಲೆಗಳನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ.
ಇದಕ್ಕೆ ಬ್ಲಾಕ್ ಡೆವಲಪ್ ಮೆಂಟ್ ಅಧಿಕಾರಿಯ ಪ್ರಮಾಣ ಪತ್ರದ ಅಗತ್ಯವಿಲ್ಲ ಹಾಗೂ ಪಂಚಾಯತ್/ ನಗರಸಭೆ/ ಪಾಲಿಕೆ ಕಾರ್ಯದರ್ಶಿಗಳ ಪ್ರಮಾಣ ಪತ್ರವೂ ಸ್ವೀಕಾರಾರ್ಹ ಎಂದು ಆಯುಕ್ತ ಎ ಅಬ್ದುಲ್ ಹಕೀಂ ತಿಳಿಸಿದ್ದಾರೆ.
ಆಯೋಗದ ಆದೇಶ ತಿರುವನಂತಪುರ ಇಳವತ್ತಂನ ನೀರ್ಪಾರ ಎನ್ ವೇಲಾಯುದನ್À ಕಣಿ ಅವರ ಅರ್ಜಿಯನ್ನು ತಿರಸ್ಕರಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆಯ ಕ್ರಮಕ್ಕೆ ವಿರುದ್ಧವಾಗಿದೆ. ಅರ್ಜಿದಾರರಿಗೆ ಗ್ರಾಚ್ಯುಟಿ ಪಡೆಯುವ ಹಕ್ಕನ್ನು ನಿರಾಕರಿಸುವ ಕ್ರಮ ಸರಿಯಲ್ಲ. 20 ಪುಟಗಳವರೆಗೆ ಎ4 ಅಳತೆಯ ಕಾಗದವನ್ನು ಉಚಿತವಾಗಿ ನೀಡಬೇಕು ಮತ್ತು ಅದಕ್ಕಿಂತ ಹೆಚ್ಚಿನ ಪುಟಕ್ಕೆ 3 ರೂ.ನಂತೆ ಶುಲ್ಕ ವಿಧಿಸಬಹುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.