ಕಾಸರಗೋಡು: ಎನ್‍ಡಿಎ ಮೊಗ್ರಾಲ್ ಪುತ್ತೂರು ಪಂಚಾಯಿತಿ ಸಮಿತಿ ವತಿಯಿಂದ ಮೋದಿ ಸರ್ಕಾರದ ಆಡಳಿತ ಸಾಧನೆಗಳನ್ನು ಜನರೊಂದಿಗೆ ಹಂಚಿಕೊಳ್ಳುವ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನತೆಗೆ ತಿಳಿಸುವ ನಿಟ್ಟಿನಲ್ಲಿ "ಜನ ಪಂಚಾಯಿತಿ" ಕಾರ್ಯಕ್ರಮ ಮೊಗ್ರಾಲಿನಲ್ಲಿ ಜರುಗಿತು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್ ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭ "ರಕ್ತದಾನಂ ಮಹಾದಾನಂ" ಘೋಷಣೆಯನ್ವಯ 31 ಬಾರಿ ರಕ್ತದಾನ ಮಾಡಿದ ಜಯೇಶ ಉಜಿರಕರ ಅವರನ್ನು ಕುಂಟರು ರವೀಶ ತಂತ್ರಿ ಸನ್ಮನಿಸಿದರು. ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್, ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ಉಮೇಶ್ ಕಡಪ್ಪುರ, ಸಂಪತ್ ಕುಮಾರ್, ಮಂಡಲ ಉಪಾಧ್ಯಕ್ಷ ಯೋಗೀಶ್, ಕಾರ್ಯದರ್ಶಿ ಅಶೋಕ್ ಸುರ್ಲು, ರೈತ ಮೋರ್ಚಾ ಮಂಡಲ ಅಧ್ಯಕ್ಷ ಯತೀಶ್ ಉಪಸ್ಥಿತರಿದ್ದರು. ಪಂಚಾಯಿತಿ, ಮಂಡಲ, ಜಿಲ್ಲಾ, ಬೂತ್ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಬೂತ್ ಅಧ್ಯಕ್ಷ ಸಂದೇಶ್ ಸ್ವಾಗತಿಸಿದರು. ಪಂಚಾಯತ್ ಪ್ರಧಾನ ಕಾರ್ಯದರ್ಶಿ ಗಣೇಶ್ ವಂದಿಸಿದರು.