ಕಾಸರಗೋಡು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಜನರಲ್ ಮ್ಯಾನೇಜರ್ ಆರ್.ಎನ್. ಸಿಂಗ್ ಕಾಸರಗೋಡು, ಕನ್ಣೂರು ಹಾಗೂ ಕೋಯಿಕ್ಕೋಡು ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿದರು. ಕೋಝಿಕ್ಕೋಡ್, ತಲಶ್ಶೇರಿ ಮತ್ತು ಕಾಞಂಗಾಡ್ ನಿಲ್ದಾಣಗಳಲ್ಲಿ ನಿರ್ಮಾಣಕಾಮಗಾರಿಗಳ ಅವಲೋಕನ ನಡೆಸಿದರು.
ಕೋಯಿಕ್ಕೋಡ್ ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿದರು ಮತ್ತು ಉದ್ದೇಶಿತ ಸ್ಥಳದ ಪರಿಸ್ಥಿತಿಗಳನ್ನು ಪರಿಶೀಲಿಸಿದರು. ನಿಲ್ದಾಣವನ್ನು ವಿಶ್ವ ದರ್ಜೆಯ ಸೌಲಭ್ಯವನ್ನಾಗಿ ಪರಿವರ್ತಿಸಲು ಪುನರಾಭಿವೃದ್ಧಿಗೆ ವಿವಿಧ ಸುಧಾರಣೆಗಳನ್ನು ಸೂಚಿಸಿದರು. ನಂತರ ಅಮೃತ್ ನಿಲ್ದಾಣದ ಯೋಜನೆಯ ಭಾಗವಾಗಿ ತಲಶ್ಯೇರಿ ನಿಲ್ದಾಣದಲ್ಲಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ನಿಲ್ದಾಣದಲ್ಲಿ ವಿಶ್ವ ದರ್ಜೆಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪುನರಾಭಿವೃದ್ಧಿ ಕಾರ್ಯಗಳ ಬಗ್ಗೆ ವಿವಿಧ ಸುಧಾರಣೆಗಳನ್ನು ಸೂಚಿಸಿದರು. ನಂತರ ಕಾಞಂಗಾಡಿನ ವರೆಗೆ ರೈಲ್ವೆ ಹಳಿ ತಪಾಸಣೆ ನಡೆಸಿದರು. ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ ಸುರಕ್ಷತಾ ವಿಧಾನದ ಬಗ್ಗೆ ಅವಲೋಕನ ನಡೆಸಿದರು.
ಆರ್.ಎನ್ ಸಿಂಗ್ ಜತೆ ಪಾಲಕ್ಕಾಡ್ ವಿಭಾಗೀಯ ರೈಲ್ವೆ ಮ್ಯಾನೇಜರ್ ಅರುಣ್ ಕುಮಾರ್ ಚತುರ್ವೇದಿ, ಗತಿಶಕ್ತಿ ವಯವಸ್ಥಾಪಕ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಸ್. ಜಯಕೃಷ್ಣನ್, ಹಿರಿಯ ವಿಭಾಗೀಯ ಇಂಜಿನಿಯರ್ ಪೆರುಮಾಳ್ ನಂದಲಾಲ್, ಎ.ವಿ. ಶ್ರೀಕುಮಾರ್ ಡಿ, ವಾಸುದೇವನ್. ಎಂ, ಅರುಣ್ ಥಾಮಸ್ ಕಲತಿಕಲ್ ಜತೆಗಿದ್ದರು.
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಜನರಲ್ ಮ್ಯಾನೇಜರ್ ಆರ್.ಎನ್. ಸಿಂಗ್ ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ ಅವಲೋಕನ ನಡೆಸಿದರು.