ಎರ್ನಾಕುಳಂ: ರಾಜ್ಯದಲ್ಲಿನ ಆಂಬ್ಯುಲೆನ್ಸ್‍ಗಳಲ್ಲಿ ಟ್ರಸ್ಟ್ಳು ಗಳು ಮತ್ತು ಪ್ರಾಯೋಜಕರ ಹೆಸರನ್ನು ಪ್ರದರ್ಶಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಕೋಝಿಕ್ಕೋಡ್‍ನಲ್ಲಿ ಕಾರ್ಯಾಚರಿಸುತ್ತಿರುವ ಚಾರಿಟಬಲ್ ಸೆಂಟರ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ಈ ಆದೇಶ ನೀಡಿದೆ.
ಆಂಬ್ಯುಲೆನ್ಸ್ ಗಳಲ್ಲಿ ಟ್ರಸ್ಟ್‍ಗಳ ಹೆಸರು, ಲೋಗೋ ಮತ್ತು ಪೋನ್ ಸಂಖ್ಯೆಯನ್ನು ಪ್ರದರ್ಶಿಸುವುದನ್ನು ನಿಷೇಧಿಸಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ ಷರತ್ತುಗಳಿಗೆ ಒಳಪಟ್ಟು ಮಾಹಿತಿ ಪ್ರದರ್ಶಿಸಬಹುದಾಗಿದ್ದು, ಸರ್ಕಾರ ಸೂಚಿಸಿರುವ ಬಣ್ಣ ಸಂಕೇತವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೈಕೋರ್ಟ್‍ನ ಆದೇಶದಲ್ಲಿ ಉಲ್ಲೇಖಿಸಲಾಗಿದೆ.