ಗಾಜಾ ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ಸಹಮತದ ಮೇರೆಗೆ ವಿಸ್ತರಣೆಯಾಗಿದ್ದ ಎರಡು ದಿನಗಳ ಕದನ ವಿರಾಮವು ಬುಧವಾರ ಅಂತ್ಯಗೊಂಡಿದೆ.
ಇದರ ಬೆನ್ನಲ್ಲೇ ಮಾನವೀಯ ದೃಷ್ಟಿಯಿಂದ ಮತ್ತೆ ಕದನ ವಿರಾಮದ ಸಂಭಾವ್ಯ ವಿಸ್ತರಣೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆಯ ಹೊಣೆ ಹೊತ್ತಿರುವ ಈಜಿಪ್ಟ್ ಹಾಗೂ ಕತಾರ್ ರಾಜತಾಂತ್ರಿಕ ಸಮಾಲೋಚನೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.