ಕಾಸರಗೋಡು: ಕರಾಳಿ ಸಾಂಸ್ಕøತಿಕ ಪ್ರತಿಷ್ಠಾನ ನಿರಂತರ ಚಟುವಟಿಕೆ ನಡೆಸುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಬೇರುಗಳನ್ನು ಮತ್ತಷ್ಟು ಭದ್ರಗೊಳಿಸಿರುವುದಾಗಿ ಧಾರ್ಮಿಕ-ಸಾಂಸ್ಕøತಿಕ ಮುಂದಳು ಕೆ.ಎನ್ ವೆಂಕಟ್ರಮಣ ಹೊಳ್ಳ ತಿಳಿಸಿದ್ದಾರೆ.
ಅವರು ಕಾಸರಗೊಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ನಡೆದ ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ ಕೇರಳ ರಾಜ್ಯ ಕನ್ನಡ ಗ್ರಮೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಪ್ರತಿಷ್ಠಾನದ 33ವರ್ಷಗಳ ಸುದೀರ್ಘ ಕಾಲದ ಸಾಧನೆಗೈದಿರುವ ಪ್ರತಿಷ್ಠಾನ ಕನ್ನಡಿಗರ ಅಭಿಮಾನದ ಪ್ರತೀಕವಾಗಿ ಬದಲಾಗಿರುವುದಾಗಿ ತಿಳಿಸಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಕವಿ ಶಿವಪ್ರಸಾದ್ ಕೊಕ್ಕಡ, ಸಾಹಿತಿ ಪ್ರತಿಮಾ ಹಾಸನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಕರಾವಳಿ ಸಾಂಸ್ಕ್ರತಿಕ ಪ್ರತಿಷ್ಠಾನ ಕೊಡಮಾಡುವ 2023ನೇ ಸಆಲಿನ ಕನ್ನಡ ಗ್ರಾಮೋತ್ಸವ ಪ್ರಶಸ್ತಿಯನ್ನು ಸಾಂಸ್ಕøತಿಕ ಸಂಘಟಕ, ಕನ್ನಡ ಹೋರಾಟಗಾರ ಗುರುಪ್ರಸಾದ್ ಕೋಟೆಕಣಿ ಅವರಿಗೆ ಪ್ರದಾನ ಮಾಡಲಾಯಿತು. ಪತ್ರಕರ್ತ ವೀಜಿ ಕಾಸರಗೋಡು ಪರಿಚಯ ನೀಡಿದರು. ಈ ಸಂದರ್ಭ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ 58ನೇ ಜನ್ಮದಿನಾಚರಣೆ ಮತ್ತು ಅಮ್ಮ ಈವೆಂಟ್ಸ್‍ನ 50ನೇ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾಸರಗೋಡುನಗರಸಭಾ ಮಾಜಿ ಸದಸ್ಯ ಶಂಕರ ಜೆ.ಪಿನಗರ, ಕವಿ ಎಂ.ಪಿ ಜಿಲ್‍ಜಿಲ್, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಉಪಸ್ಥಿತರಿದ್ದರು. ವಿ ಶಿವಪ್ರಸಾದ್ ಕೊಕ್ಕಡ, ಸಾಹಿತಿ ಪ್ರತಿಮಾ ಹಾಸನ ಅವರನ್ನು ಗೌರವಿಸಲಾಯಿತು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿವಾಕರ ಅಶೋಕನಗರ ಸ್ವಾಗತಿಸಿದರು. ಶ್ರೀಕಾಂತ್ ಕಾಸರಗೋಡು, ಕಾವ್ಯಾಕುಶಲ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಬೇಕಲ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ವೈವಿಧ್ಯ ಜರುಗಿತು.