HEALTH TIPS

'ಮೈ ಲಾರ್ಡ್' ಸಂಬೋಧನೆ ನಿಲ್ಲಿಸಿದರೆ ನನ್ನ ಅರ್ಧ ಸಂಬಳ ನೀಡುವೆ: ನ್ಯಾ. ನರಸಿಂಹ

              ವದೆಹಲಿ: ನ್ಯಾಯಾಂಗ ಪ್ರಕ್ರಿಯೆ ಸಂದರ್ಭದಲ್ಲಿ ವಕೀಲರು ಪ್ರಕರಣಗಳ ಕುರಿತು ವಾದ ಮಂಡಿಸುವಾಗ 'ಮೈ ಲಾರ್ಡ್' ಮತ್ತು 'ಯುವರ್ ಲಾರ್ಡ್‌ಶಿಪ್' ಎಂದು ಸಂಬೋಧಿಸುತ್ತಾರೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

             ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರೊಂದಿಗಿನ ಪೀಠದಲ್ಲಿದ್ದ ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರು ಹಿರಿಯ ವಕೀಲರೊಬ್ಬರಿಗೆ 'ಮೈ ಲಾರ್ಡ್ಸ್ ಎಂದು ಎಷ್ಟು ಬಾರಿ ಹೇಳುತ್ತೀರಿ?.

                ಹೀಗೆ ಹೇಳುವುದನ್ನು ನಿಲ್ಲಿಸಿದರೆ ನನ್ನ ಸಂಬಳದಲ್ಲಿ ಅರ್ಧದಷ್ಟು ನಿಮಗೆ ಕೊಡುತ್ತೇನೆ' ಎಂದು ಹೇಳಿದ್ದರು.

               ಸರ್ ಎಂದು ಏಕೆ ಬಳಸಬಾರದು?, ಇಲ್ಲದಿದ್ದರೆ ಹಿರಿಯ ವಕೀಲರು ಮೈ ಲಾರ್ಡ್ಸ್ ಎಂಬ ಪದವನ್ನು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಲೆಕ್ಕ ಹಾಕಬೇಕಾಗುತ್ತದೆ ಎಂದು ನ್ಯಾ.ನರಸಿಂಹ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries