ಪತ್ತನಂತಿಟ್ಟ: ಶಬರಿಮಲೆಯಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಅಲಂಕರಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ಪಂಬಾ ವಿಶೇಷಾಧಿüಕಾರಿ ಕೆಎಸ್‍ಆರ್‍ಟಿಸಿ ನೌಕರರಿಗೆ ಎಚ್ಚರಿಕೆ ನೀಡಿರುವರು. ಶಬರಿಮಲೆ ತಲುಪುವ ಬಸ್ ಗಳನ್ನು ಅಲಂಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಿಪೋ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪಂಬಾ ವಿಶೇಷಾಧಿಕಾರಿ ಸೂಚನೆ ನೀಡಿರುವರು.
ಶಬರಿಮಲೆಗೆ ತೆರಳುವ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಸುರಕ್ಷತಾ ನಿಯಮಗಳಿಗೆ ವಿರುದ್ಧವಾದ ಅಲಂಕಾರ ಮಾಡಬಾರದು ಎಂದು ಈ ಹಿಂದೆ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪಾಲಿಸದ ಅಲಂಕೃತ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಹಿಂದಿನ ಆದೇಶದಲ್ಲಿನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದೂ ನ್ಯಾಯಾಲಯ ಸೂಚಿಸಿತ್ತು. ಆದರೆ, ಈ ಆದೇಶಗಳನ್ನು ಉಲ್ಲಂಘಿಸಿ ಅಲಂಕೃತ ವಾಹನಗಳು ಇನ್ನೂ ಆಗಮಿಸುತ್ತಿವೆ. ಇದನ್ನು ಗಮನಿಸಿದ ಪಂಬಾ ವಿಶೇಷಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಸ್ ಗಳಿಗೆ ಅಪರಿಮಿತವಾಗಿ ಅಲಂಕಾರ ಮಾಡುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಂದಿನ ಹಾಗೂ ಹಿಂದಿನ ಗಾಜುಗಳು ಮುಚ್ಚಲ್ಪಟ್ಟು ಅಪಘಾತಗಳಿಗೆ ಎಡೆಯಾದ ಹಲವು ಉದಾಹರಣೆಗಳಿರುವುದರಿಂದ ಈ ಕಾನೂನು ಜಾರಿಗೆ ಬಂದಿತ್ತು.