ಬದಿಯಡ್ಕ: ಏತಡ್ಕದ ಸಾಂತ್ವನ ಸ್ಪರ್ಶ ವಾಟ್ಸ್ ಆಫ್ ತಂಡದ ನೇತೃತ್ವ ದಲ್ಲಿ ಪುರುಷೋತ್ತಮ ಕುದಿಂಗಿಲ ಇವರ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ಕರ್ಷಕ ಮೋರ್ಚಾ ಮಂಡಲ ನೇತಾರ ವಿಷ್ಣುಭಟ್ ಪಡಿಕ್ಕಲ್ಲು ಅವರು ಏತಡ್ಕದ ಬಿಜೆಪಿ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯ ಕೃಷ್ಣ ಶರ್ಮ.ಜಿ, ಬಿಜೆಪಿ ಮಂಡಲ ಸದಸ್ಯರಾದ ವೈ.ಕೆ. ಗಣಪತಿ ಭಟ್, ಶಶಿಧರ ಪಡಿಕ್ಕಲ್ಲು, ಕೃಷ್ಣ ನಾಯ್ಕ, ಮಧು ಪ್ರಕಾಶ್, ಉದಯ ವೈ.ಬಿ. ಮೊದಲಾದವರು ಉಪಸ್ಥಿತರಿದ್ದರು.