ಕಾಸರಗೋಡು: ಕೇರಳ ರಾಜ್ಯ ಯುವಜನ ಕಮೀಷನ್ ಯುವಜನರನ್ನು ಬಾಧಿಸುವ ಸಾಮಾಜಿಕ ವಿಪತ್ತುಗಳ ವಿರುದ್ಧ ಜಾಗೃತಿಯನ್ನು ಬಲಪಡಿಸುವ ಉದ್ದೇಶದಿಂದ ಶಾರ್ಟ್ ಫಿಲ್ಮ್ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಯುವಜನರ ಮಾನಸಿಕ ಆರೋಗ್ಯ ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸುವ ವಿಷಯಗಳನ್ನು ಒಳಗೊಂಡು ಯುವಕರಲ್ಲಿ ಹೆಚ್ಚುತ್ತಿರುವ ಮದ್ಯ , ಮಾದಕ ದ್ರವ್ಯ ವ್ಯಸನ, ಆನ್‍ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಶಾರ್ಟ್ ಫಿಲ್ಮ್ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 20,000, 15,000 ಮತ್ತು 10,000 ರೂ. ನಗದು ಬಹುಮಾನ ನೀಡಲಾಗುವುದು. ಶಾರ್ಟ್ ಫಿಲ್ಮ್ ಅವಧಿಯು 10 ನಿಮಿಷಗಳನ್ನು ಮೀರಬಾರದು. ಸ್ಪರ್ಧೆಗೆ ಕಳುಹಿಸುವ ಶಾರ್ಟ್ ಫಿಲ್ಮ್ ಪೆನ್ ಡ್ರೈವ್‍ನಲ್ಲಿ ನಿರ್ದೇಶಕರ ಪೂರ್ಣ ವಿಳಾಸದೊಂದಿಗೆ 2023 ಡಿಸೆಂಬರ್ 20 ರೊಳಗೆ ವಿಕಾಸ ಭವನದಲ್ಲಿರುವ ಕಮೀಷನ್ ಆಫೀಸ್‍ಗೆ ಅಂಚೆ ಮೂಲಕ (ಕೇರಳ ರಾಜ್ಯ ಯುವಜನ ಕಮೀಷನ್, ವಿಕಾಸ್ ಭವನ್, ಪಿ.ಎಂ.ಜಿ, ತಿರುವನಂತಪುರಂ-33) ಅಥವಾ ನೇರವಾಗಿ ನೀಡಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ (0471 2308630) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.