HEALTH TIPS

ಬದಿಯಡ್ಕದಲ್ಲಿ ಗೋಪೂಜೆ; ಕುಣಿತ ಭಜನೆ, ಗೋವು ವಿಶ್ವಕ್ಕೇ ಮಾತೆ: ಎಡನೀರು ಶ್ರೀ

            ಬದಿಯಡ್ಕ: ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಬದಿಯಡ್ಕ ಗಣೇಶಮಂದಿರದಲ್ಲಿ ಭಾನುವಾರ ಸಂಜೆ ಗೋಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದ|ಭರ್Àದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅನುಗ್ರಹ ಭಾಷಣದಲ್ಲಿ ಗೋಪೂಜೆಯ ಮೂಲಕ ಗೋವಿನ ಕುರಿತಾದ ಶ್ರದ್ಧೆಯನ್ನು ಮತ್ತಷ್ಟು ಮೈಗೂಡಿಸಿಕೊಳ್ಳುವುದರೊಂದಿಗೆ ಸನಾತನ ಧರ್ಮಕ್ಕೆ ಪೂರಕವಾದ ಹಬ್ಬ ಹರಿದಿನಗಳ ಆಚರಣೆಯನ್ನು ಮಾಡಬೇಕು. ಧನಧಾನ್ಯಗಳನ್ನು ಪೂಜ್ಯಭಾವದಿಂದ ಕಾಣುವ ನಾವು ಪ್ರಕೃತಿಯನ್ನು ಪೂಜಿಸುತ್ತೇವೆ. ಯುವಜನಾಂಗವು ಆಚರಣೆಗಳಲ್ಲಿ ತೊಡಗಿಕೊಂಡಾಗ ಅವರಿಗೆ ಧರ್ಮದ ಅರಿವು ಮೂಡಿಬರುತ್ತದೆ. ಅರಿವಿನ ಕೊರತೆಯಿಂದ ಯುವಜನಾಂಗವು ದಾರಿತಪ್ಪದಂತೆ ನೋಡಿಕೊಳ್ಳಬೇಕು ಎಂದರು. 

             ಯುವ ವಾಗ್ಮಿ, ಚಿಂತಕ ಲತೇಶ್ ಬಾಕ್ರಬೈಲು ಧಾರ್ಮಿಕ ಉಪನ್ಯಾಸ ನೀಡಿದರು. ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಹರಿಪ್ರಸಾದ ರೈ ಪುತ್ರಕಳ ಅಧ್ಯಕ್ಷತೆ ವಹಿಸಿದ್ದರು. ಕೇರಳ ಪ್ರಾಂತ್ಯ ಕಾರ್ಯದರ್ಶಿ ರಾಜಶೇಖರನ್ ಜೀ, ಕರ್ನಾಟಕ ಪ್ರಾಂತ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಶುಭಾಶಂಸನೆಗೈದರು. ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸೇವಾಕಾರ್ಯದರ್ಶಿ ಸುರೇಶ್ ಶೆಟ್ಟಿ ಪರಂಕಿಲ, ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಉಪಸ್ಥಿತರಿದ್ದರು. ವಿಘ್ನೇಶ್ ಬಾಲಗೋಕುಲದ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಬದಿಯಡ್ಕ ಪ್ರಖಂಡ ಪ್ರಧಾನ ಕಾರ್ಯದರ್ಶಿ ಮಂಜುನಾಥ ಡಿ. ಮಾನ್ಯ ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ವಂದಿಸಿದರು. ಶಬರಿಗಿರಿ ಮಹಿಳಾ ಭಜನ ಸಂಘ ಬದಿಯಡ್ಕ ಮತ್ತು ಶ್ರೀ ಪಾರ್ಥಸಾರಥಿ ಮಹಿಳಾ ಭಜನಾ ಸಂಘ ಮುಜುಂಗಾವು ಇವರಿಂದ ಭಜನ ಸೇವೆ, ಗೋಪೂಜೆ, ಗೋಗ್ರಾಸ, ಲಕ್ಷ್ಮೀ ಗಣೇಶ್ ಕುಣಿತ ಭಜನಾ ಸಂಘ ಗಣೇಶಮಂದಿರ ಇವರಿಂದ ಕುಣಿತ ಭಜನೆ ಹಾಗೂ ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries