ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಹಿನ್ನೆಲೆಯಲ್ಲಿ ಧಾರ್ಮಿಕ ಮುಂದಾಳು, ಖ್ಯಾತ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ನೂತನಾಗಿ ನಿರ್ಮಿಸಿ ದೇವಾಲಯಕ್ಕೆ ಸಮರ್ಪಿಸಲಿರುವ 'ಮಹಾದ್ವಾರ'ದ ಶಿಲಾನ್ಯಾಸ ಸಮಾರಂಭ ನ. 25ರಂದು ಬೆಳಗ್ಗೆ 9.45ಕ್ಕೆ ದೇವಸ್ಥಾನ ವಠಾರದಲ್ಲಿ ಜರುಗಲಿರುವುದು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಮಹಾದ್ವಾರದ ಸೇವಾಕರ್ತೃ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅವರು ಶಿಲಾನ್ಯಾಸ ನಡೆಸುವರು. ಈ ಸಂದರ್ಭ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನಿಡುವರು.
ನವೀಕರಣ ಸಮಿತಿ ಅಧ್ಯಕ್ಷ ಯು.ಟಿ ಆಳ್ವ ಅಧ್ಯಕ್ಷತೆ ವಹಿಸುವರು. ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್, ಕಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ವಿಶೇಷ ಆಹ್ವಾನಿತರಾಗಿರುವರು. ದೇವಸ್ಥಾನ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಬ್ರಹ್ಮಶ್ರೀ ದೇರೆಬೈಲು ಶಿವ ಪ್ರಸಾದ ತಂತ್ರಿ, ಮಧೂರು ದಏವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಮಾಯಿಪ್ಪಾಡಿ ಅರಮನೆ ದಾನಮಾರ್ತಾಂಡವರ್ಮ ರಾಜ ಯಾನೆ ರಾಮಂತರಸುಗಳು, ಆರೆಸ್ಸೆಸ್ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಟೋಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಗೌರವ ಉಪಸ್ಥಿತಿತರಿರುವರು.