ಸಮರಸ ಚಿತ್ರಸುದ್ದಿ: ಬದಿಯಡ್ಕ: ಇತ್ತೀಚೆಗೆ ಪೇರಾಲ್ ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ಕನ್ನಡ ಕಂಠಪಾಠದಲ್ಲಿ ‘ಎ’ ಗ್ರೇಡ್ ನೊಂದಿಗೆ ಪ್ರಥಮ, ಕನ್ನಡ ಭಾಷಣದಲ್ಲಿ ‘ಎ’ ಗ್ರೇಡ್ ನೊಂದಿಗೆ ದ್ವಿತೀಯ, ಒಗಟು ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ನೊಂದಿಗೆ ದ್ವಿತೀಯ ಹಾಗೂ ಭರತನಾಟ್ಯದಲ್ಲಿ ‘ಎ’ ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ಮನಸ್ವಿ ಶರ್ಮ. ಈಕೆ ಶ್ರೀ ಸುಬ್ರಹ್ಮಣ್ಯ ಎ.ಎಲ್.ಪಿ. ಶಾಲೆ ಮರಿಕ್ಕಾನ ಇಲ್ಲಿನ 4 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ನೃತ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆಯಾದ ಈಕೆ ವೆಂಕಟ್ರಮಣ ಶರ್ಮ ಸೈಪಂಗಲ್ಲು ಹಾಗೂ ಪದ್ಮಶ್ರೀ ಇವರ ಪುತ್ರಿ.