ಕಾಸರಗೋಡು: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 39ನೇ ಹುತಾತ್ಮ ದಿನವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಚರಿಸಲಾಯಿತು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ವಿಶ್ವ ಶಾಂತಿಗಾಗಿ ಹೋರಾಟ ನಡೆಸಿದ ಧೀಮಂತ ನಾಯಕಿಯಾಗಿದ್ದು, ದೇಶಕ್ಕಾಗಿ ತಮ್ಮ ಜೀವ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಪಿ. ಎ.ಅಶ್ರಫ್ ಅಲಿ, ಐಕ್ಯರಂಗ ಸಂಚಾಲಕ ಎ.ಗೋವಿಂದನ್ ನಾಯರ್, ಸೇವಾದಳದ ರಾಜ್ಯಾಧ್ಯಕ್ಷ ರಮೇಶ ಕರುವಾಚೇರಿ, ವಕೀಲ ಯು. ಎಸ್. ಬಾಲನ್, ಡಿಸಿಸಿ ಪದಾಧಿಕಾರಿಗಳಾದ ಎಂ. ಸಿ. ಪ್ರಭಾಕರನ್, ಎಂ. ಕುಞಂಬು ನಂಬಿಯಾರ್, ಕರುಣ್ ಥಾಪಾ, ವಿನೋದ್ ಕುಮಾರ್, ಸಿ. ವಿ. ಜೇಮ್ಸ್, ಟಾಮಿ ಪ್ಲಚೇರಿ, ಎಂ. ರಾಜೀವನ್ ನಂಬಿಯಾರ್, ಟಿ. ಗೋಪಿನಾಥನ್ ನಾಯರ್, ಮನಾಫ್ ನುಳ್ಳಿಪಾಡಿ, ಕೆ. ಖಾಲಿದ್, ಎ. ವಾಸುದೇವನ್ ನಾಯರ್, ಜಾವಾದ್ ಪುತ್ತೂರು, ಮುನೀರ್ ಬಾಂಗೋಡ್ ಉಪಸ್ಥೀತರಿದ್ದರು.