ಬದಿಯಡ್ಕ: ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ವಾರ್ಷಿಕ ಪಾಟು, ಶ್ರೀ ಭೂತಬಲಿ ಉತ್ಸವ ಹಾಗೂ ಶ್ರೀ ಧೂಮಾವತಿ ದೈವದ ಕೋಲವು ಡಿ.16ರಿಂದ 20ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರಂಗವಾಗಿ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರದ ಟ್ರಿಸ್ಟಿ ಕಿರಣ್ ಕುಮಾರ್ ಕುಣಿಕುಳ್ಳಾಯ ಅವರು ಪ್ರಧಾನ ಅರ್ಚಕ ಭಾಸ್ಕರ ಐತಾಳ್ ಅವರಿಗೆ ನೀಡಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಡುಮನೆ ಹರೀಶ್ ಕುಣಿಕುಳ್ಳಾ, ಅಗಲ್ಪಾಡಿ ಶಾಲಾ ಪ್ರಬಂಧಕ ನಾರಾಯಣ ಶರ್ಮಾ, ಶ್ರೀ ಧರ್ಮಶಾಸ್ತಾ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಕುರುಪ್, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕುರುಪ್ ಮಾಸ್ತರ್, ಗಣರಾಜ್ ಭಟ್, ಉದಯ ಕುಮಾರ್ ಕಲ್ಲಕಟ್ಟ, ರಾಜಶೇಖರ ಮಾಸ್ತರ್, ಪುರುಷೋತ್ತಮ ಪ್ರಸಾದ್, ರಾಜೇಶ್ ಮಾಸ್ತರ್, ಗಂಗಾಧರ್ ತೆಕ್ಕೆಮೂಲೆ, ಕೃಷ್ಣ ಮಣಿಯಾಣಿ, ಕೃಷ್ಣ ಕೆಜಿಬಿ, ವೇಣುಗೋಪಾಲ್, ಸುಮೇಶ್, ಶಶಿ ಕುರುಪ್, ಸುಶೀಲ, ಲೀಲಾವತಿ ಮತ್ತಿತರರು ಭಾಗವಹಿಸಿದರು.