ತಿರುವನಂತಪುರಂ; ಖಾಸಗಿ ಬಸ್ ಮುಷ್ಕರ ವಿರುದ್ಧ ಸಾರಿಗೆ ಸಚಿವ ಆಂಟನಿ ರಾಜು ಹರಿಹಾಯ್ದಿದ್ದು ಶಬರಿಮಲೆ ಯಾತ್ರೆ ವೇಳೆ ಬಸ್ ಮಾಲೀಕರು ಅನಿರ್ದಿμÁ್ಟವಧಿ ಮುಷ್ಕರ ನಡೆಸುವ ಮೂಲಕ ಒತ್ತಡ ಹೇರಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅನಿರ್ದಿಷ್ಟಾವಧಿ ಧರಣಿ ವಿರುದ್ಧ ಟೀಕೆಗೆ ಮುಂದಾದ ಸಚಿವರು ಮುಷ್ಕರವನ್ನು ಒಪ್ಪಿಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳ ರಿಯಾಯಿತಿ ಹೆಚ್ಚಳ, 140 ಕಿ.ಮೀ.ಗೂ ಹೆಚ್ಚು ಪರ್ಮಿಟ್ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳಿಗೆ ಆಗ್ರಹಿಸಿ ಖಾಸಗಿ ಬಸ್ ಗಳು ನಿನ್ನೆ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರರ ವರೆಗೆ ಮುಷ್ಕರ ನಡೆಸಿದವು. 21ರಿಂದ ಅನಿರ್ದಿμÁ್ಟವಧಿ ಮುಷ್ಕರ ನಡೆಸುವುದಾಗಿಯೂ ಘೋಷಿಸಿದ್ದಾರೆ.
ಬಸ್ ಮುಷ್ಕರದಿಂದ ಮಧ್ಯ ಕೇರಳ ಮತ್ತು ಉತ್ತರ ಕೇರಳದ ಜನರು ಸಂಕಷ್ಟಕ್ಕೀಡಾದರು. ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಖಾಸಗಿ ಬಸ್‍ಗಳ ಒಂದು ವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಈ ನಡುವೆ ಸಾರಿಗೆ ಇಲಾಖೆ ಇಂದಿನಿಂದÀ ಬಸ್ ಹಾಗೂ ಭಾರೀ ವಾಹನಗಳಲ್ಲಿ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಕಡ್ಡಾಯಗೊಳಿಸಿ ಆದೇಶ ಬದಲಿಸಿದೆ. ನವೆಂಬರ್ 1 ರ ನಂತರ ಫಿಟ್ನೆಸ್ ನೀಡುವ ವಾಹನಗಳಿಗೆ ಹೊಸ ಆದೇಶವು ಕಡ್ಡಾಯವಾಗಿದೆ.