ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕುಂಬಳೆ ಉಪಜಿಲ್ಲೆಯ 1ನೇ ತರಗತಿ ವಿದ್ಯಾರ್ಥಿಗಳ ಸಂಯೋಜಿತ ದಿನಚರಿ ಸಂಗ್ರಹವನ್ನು ಮುಳ್ಳೇರಿಯದಲ್ಲಿ ನಡೆದ ಅಧ್ಯಾಪಕ ಸಂಗಮದಲ್ಲಿ ಬಿಡುಗಡೆ ಮಾಡಲಾಯಿತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಕೆ. ಅವರು ಬಿ.ವಿ.ಸಿ.ಜೆ ಜಯರಾಮ್ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಅಧ್ಯಾಪಕರಾದ ಕೆ.ಕೆ. ಮೋಹನನ್, ಶ್ಯಾಮ್ ಸುಂದರ್ ಪಿವಿಕೆ, ಪ್ರತಿಭಾ, ಕೆ.ಶ್ರುತಿ, ಗಿರೀಶ್ ಎಸ್. ಉಪಸ್ಥಿತರಿದ್ದರು.