ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವದ ಲಾಂಛನ ಬಿಡುಗಡೆ ಸಮಾರಂಭ ಕಾಞಂಗಾಡಿನ ಲೋಕೋಪಯೋಗಿ ವಿಶ್ರಾಂತಿ ಗೃಹದಲ್ಲಿ ಜರುಗಿತು. ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ವೀಣಾ ಜಾರ್ಜ್ ಲಾಂಛನ ಬಿಡುಗಡೆಗೊಳಿಸಿದರು.
ಬೇಕಲ್ ರೆಸಾರ್ಟ್ ಡೆವೆಲಪ್‍ಮೆಂಟ್ ಕಾರ್ಪೋರೇಶನ್(ಬಿಆರ್‍ಡಿಸಿ)ವ್ಯವಸ್ಥಾಪಕ ನಿರ್ದೇಶಕ ಪಿ.ಶಿಜಿನ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷರು ಕೆ.ಮಣಿಕಂಠನ್, ಪಳ್ಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಅಜನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಸಬೀಶ್, ಸಂಘಟನಾ ಸಮಿತಿ ಪದಾಧಿಕಾರಿಗಳಾದ ಸುಕುಮಾರನ್ ಪೂಚ್ಕಾಡ್, ಕೆ.ಇ.ಎ.ಬಕ್ಕರ್, ಶಿವದಾಸನ್ ಕಾಞಂಗಾಡ್, ಪತ್ರಿಕಾ ವೇದಿಕೆ ಅಧ್ಯಕ್ಷ ಟಿ.ಕೆ.ನಾರಾಯಣನ್, ಜಯನ್ ಮಾಙËಡ್, ಕೆ.ಎಸ್.ಗೋಪಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ಎಂ-ಸ್ಕೇಪ್ ಪೆÇ್ರಡಕ್ಷನ್ ಕಾಂಞಂಗಾಡ್ ಲಾಂಛನವನ್ನು ವಿನ್ಯಾಸಗೊಳಿಸಿದೆ.