ಉಪ್ಪಳ: ಪೈವಳಿಕೆ ಸರ್ಕಾರಿ ಹಯರ್ ಸೆಕೆಂಡರಿ ಶಾಲೆ (ಕಾಯರ್ ಕಟ್ಟೆ) ವಿದ್ಯಾರ್ಥಿನಿ ಫಾತಿಮತ್ ಸನಾ ರಾಜ್ಯ ಮಟ್ಟದ ಸಬ್ ಜೂನಿಯರ್ ಕೊಕ್ಕೊ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಕ್ರೀಡೆ, ಕಲಾ ರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸನಾ ಏಳನೇ ತರಗತಿ ವಿದ್ಯಾರ್ಥಿನಿ. ಕೋಝಿಕ್ಕೋಡಿನಲ್ಲಿ ನಡೆಯುವ ರಾಜ್ಯ ಮಟ್ಟದ ಕೊಕ್ಕೊ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಇವಳು ಪ್ರತಿನಿಧಿಸಲಿದ್ದಾಳೆ. ಪೈಜಲ್ ಕಾಯರ್ ಕಟ್ಟೆ ಹಾಗೂ ಆಯಿಶತುಲ್ ತಾಹಿರ ದಂಪತಿಗಳ ಪುತ್ರಿಯಾದ ಸನಾ ತೋರಿದ ಸಾಧನೆಗೆ ಶಾಲಾ ಅಧ್ಯಾಪಕ ವೃಂದ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘ, ಎಸ್ ಎಮ್ ಸಿ ಸಮಿತಿ ಅಭಿನಂದನೆ ಸಲ್ಲಿಸಿದೆ.