ಕುಂಬಳೆ: ಆರಿಕ್ಕಾಡಿ ಶ್ರೀ ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೋಮರಾಯಿ ದೈವಸ್ಥಾನದ ವಿಜ್ಞಾಪನಾ ಪತ್ರವನ್ನು ಸಮಿತಿಯ ಸಂರಕ್ಷಕ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯರ ದಿವ್ಯ ಉಪಸ್ಥಿತಿಯಲ್ಲಿ ಬುಧವಾರ ಶ್ರೀಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷ ಮಂಜುನಾಥ ಆಳ್ವ ಮಡ್ವ, ದೂಮಣ್ಣ ಶೆಟ್ಟಿ ಕೊಡ್ಯಮ್ಮೆ ಗುತ್ತು, ನಾಗೇಶ್ ಕಾರ್ಳೆ, ರಾಮಚಂದ್ರ ಶೆಟ್ಟಿ ಬೀರಂಟಿಕೆರೆ ಹಾಗೂ ಸಮಿತಿಯ ಕಾರ್ಯದರ್ಶಿಗಳಾದ ಕೃಷ್ಣಪ್ಪ ಪೂಜಾರಿ ಶೇಣಿ, ಲಕ್ಷಣ ಆಳ್ವ ಕುಂಡಾಪು ಗುತ್ತು, ರಮೇಶ್ ರೈ ಕುಂಡಾಪು ಗುತ್ತು, ಲೋಕನಾಥ ಶೆಟ್ಟಿ ಉಜಾರು, ಸುಬ್ಬಣ್ಣ ಬಂಬ್ರಾಣಬೈಲು, ಸಂಜೀವ ಪೂಜಾರಿ ಜೋಡುಗೋಳಿ, ಗಂಗಾಧರ ಕುಂಡಾಪು ಹಾಗೂ ಸಧಸ್ಯರಾದ ನಾಗೇಶ್, ಚಂದ್ರಶೇಖರ ಪಿ.ಕೆ, ಪೂವಪ್ಪ ಪೂಜಾರಿ ಮುಂಡಿತ್ತಡ್ಕ, ಗೋಪಾಲ ಕೃಷ್ಣ, ಕಮಲ, ಸುಂದರಿ ಉಪಸ್ಥಿತರಿದ್ದರು. ಅಥಿತಿಗಳಾಗಿ ಅಜಯನ್ ಆಚಾರ್ಯ ಪಯ್ಯನ್ನೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಲಯ ಮೇಲ್ವಿಚಾರಕ ರಮೇಶ್.ಎಂ., ಬಡುವನ್ ಕುಂಞÂ್ಞ ಕುಂಡಾಪು, ಮೊಕ್ತೇಸರ ಐತ್ತಪ್ಪ ಆರಿಕ್ಕಾಡಿ ಹಾಗೂ ಕೋಶಾಧಿಕಾರಿ ಅಜಯ ಕುಮಾರ್ ಉಪಸ್ಥಿತರಿದ್ದರು.