ಶ್ರೀಕಂಠಪುರಂ: ನವಕೇರಳ ಸಮಾವೇಶಕ್ಕೆ ಮಂಜೂರಾಗಿದ್ದ ಹಣವನ್ನು ಹಿಂಪಡೆಯುವಂತೆ ಶ್ರೀಕಂಠಪುರಂ ನಗರಸಭೆಯು ನಿರ್ಣಯ ಅಂಗೀಕರಿಸಿತು. ಶ್ರೀಕಂಠಪುರಂ ಮುನ್ಸಿಪಲ್ ಕಾರ್ಪೋರೇಷÀನ್ ಯುಡಿಎಫ್ ಆಡಳಿತದಲ್ಲಿದ್ದು, ರಾಜ್ಯಾದ್ಯಂತ ನವ ಕೇರಳ ಸಮಾವೇಶಕ್ಕೆ ಬಹಿಷ್ಕಾರ ನೀಡಿದೆ. ಇಂದು ನಡೆದ ವಿಶೇಷÀ ಕೌನ್ಸಿಲ್ ಸಭೆಯಲ್ಲಿ ಮೊತ್ತವನ್ನು ಪಾವತಿಸುವ ನಿರ್ಧಾರವನ್ನು ಹಿಂಪಡೆಯಲಾಯಿತು.
ನವಕೇರಳ ಸಮಾವೇಶಕ್ಕೆ ನಯಾಪೈಸೆಯೂ ನೀಡುವುದಿಲ್ಲ ಎಂದು ನಗರಸಭೆ ಅಧ್ಯಕ್ಷೆ ಕೆ.ವಿ. ಫಿಲೋಮಿನಾ ಮಾಹಿತಿ ನೀಡಿದರು. ವಿಶೇಷ ಕೌನ್ಸಿಲ್ ಸಭೆಗೆ ಎಡಪಕ್ಷಗಳ ಒಬ್ಬ ಸದಸ್ಯನೂ ಹಾಜರಾಗಿರಲಿಲ್ಲ.
ಯುಡಿಎಫ್ ಆಡಳಿತವಿರುವ ಮಹಾನಗರ ಪಾಲಿಕೆಗಳು ಅಥವಾ ಇತರ ಸ್ಥಳೀಯಾಡಳಿತ ಸಂಸ್ಥೆಗಳು ನವಕೇರಳ ಸದಸ್‍ಗೆ ಯಾವುದೇ ಮೊತ್ತವನ್ನು ಪಾವತಿಸಬಾರದು ಎಂದು ಯುಡಿಎಫ್ ಈ ಹಿಂದೆ ನಿರ್ಧರಿಸಿತ್ತು. ನಗರಸಭೆಯ ನಿರ್ಣಯವು ಇದನ್ನು ತಳ್ಳಿಹಾಕಿತ್ತು. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಮತ್ತಿತರರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದರು.
ಆದರೆ, ಹಣ ಹಂಚಿಕೆಗೆ ಸಂಬಂಧಿಸಿದ ಯುಡಿಎಫ್ ಸುತ್ತೋಲೆ ತಡವಾಗಿ ಬಂದಿದ್ದು, ಈ ಬಗ್ಗೆ ಯುಡಿಎಫ್ ನಿರ್ಧಾರವನ್ನು ಜಾರಿಗೊಳಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.