ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಸಾರ್ವಜನಿಕ ಯೋಜನೆಗಳಿಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳನ್ನು ಮತ್ತು ಟ್ರಕ್‌ಗಳು ಹಾಗೂ ವಾಣಿಜ್ಯ ಬಳಕೆ ನಾಲ್ಕು ಚಕ್ರಗಳ ವಾಹನಗಳು ರಾಷ್ಟ್ರ ರಾಜಧಾನಿ ಪ್ರವೇಶ ನಿಷೇಧಿಸಿ ಕೇಂದ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.
ಕೇಂದ್ರದ ವಾಯುಮಾಲಿನ್ಯ ನಿಯಂತ್ರಣ ಯೋಜನೆ ಅಡಿ ಈಗಾಗಲೇ ಮೂರು ಹಂತದಲ್ಲಿ ನಿಬಂಧನೆಗಳನ್ನು ವಿಧಿಸಲಾಗಿದ್ದು, ಈಗ ನಾಲ್ಕನೇ ಹಂತದ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.
ದೆಹಲಿಯಲ್ಲಿ ಮಾಲಿನ್ಯಕಾರಕ ಟ್ರಕ್‌ಗಳು ಮತ್ತು ವಾಣಿಜ್ಯ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಇತರ ರಾಜ್ಯಗಳ ಸಿಎನ್‌ಜಿ, ಎಲೆಕ್ಟ್ರಿಕ್, ಬಿಎಸ್ 4 ವಾಹನಗಳಿಗೆ ಮಾತ್ರ ದೆಹಲಿಯನ್ನು ಪ್ರವೇಶಿಸಲು ಅನುಮತಿ ನೀಡಲಾಗಿದೆ.
ಇನ್ನು ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಕೇಂದ್ರ ನಿರ್ದೇಶಿಸಿದೆ. ಉಳಿದ ಶೇ. 50 ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ.