ಕಾಸರಗೋಡು: ಕೈಯೂರಿನ ಸರ್ಕಾರಿ ಐಟಿಐನಲ್ಲಿ 2018 ರಲ್ಲಿ ಪ್ರವೇಶ ಪಡೆದ ಎರಡು ವರ್ಷ ಟ್ರೈನಿಗಳಲ್ಲಿ, 2019 ರಿಂದ 2022 ರವರೆಗೆ ಪ್ರವೇಶ ಪಡೆದ ಒಂದು ಹಾಗೂ ಎರಡು ವರ್ಷದ ಟ್ರೈನಿಗಳಲ್ಲಿ ಇನ್ನೂ ಪರೀಕ್ಷೆ ಉತ್ತೀರ್ಣ ಆಗದವರಿಂದ 2023 ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಖಿಲ ಭಾರತ ಸಪ್ಲಿಮೆಂಟರಿ ಟ್ರೇಡ್ ಟೆಸ್ಟ್ ಪ್ರಾಕ್ಟಿಕಲ್ ಯಾ ಇಂಜಿನಿಯರಿಂಗ್ ಡ್ರಾಯಿಂಗ್, ಸಿಬಿಟಿ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 8 ಆಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0467 2230980)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.