ಅಂತರರಾಷ್ಟ್ರೀಯ ಎರಡು ದಿನಗಳ ಸಿರಿಧಾನ್ಯಗಳ ಸಮಾವೇಶ ನಡೆಯುತ್ತಿದೆ. ನಮ್ಮ ಪೂರ್ವಜರಿಗೆ ರಾಗಿ, ನವಣೆ ಇವೆಲ್ಲಾ ಪ್ರಮುಖ ಆಹಾರವಾಗಿತ್ತು. ನಾವೆಲ್ಲಾ ನಮ್ಮ ಪೂರ್ವಜರು ಅಷ್ಟೊಂದು ಆರೋಗ್ಯಕರವಾಗಿದ್ದರು, ನಮಗೇಕೆ ಈ ರೀತಿ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಯೋಚಿಸುತ್ತೇವೆ, ಅದಕ್ಕೆ ಪ್ರಮುಖ ಕಾರಣ ನಮ್ಮ ಆಹಾರಕ್ರಮ. ಇದರ ಬಗ್ಗೆ ಈಗೀಗ ಎಲ್ಲರಿಗೆ ಅರಿವು ಉಂಟಾಗುತ್ತಿದೆ, ಜನರು ಮತ್ತೆ ತಮ್ಮ ಆಹಾರದಲ್ಲಿ ಸಿರಿಧಾನ್ಯ ಸೇರಿಸಲಾರಂಭಿಸಿದ್ದಾರೆ.
ಪ್ರತಿನಿತ್ಯ ಸಿರಿಧಾನ್ಯಗಳನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಖಂಡಿತ ಪಡೆಯಬಹುದು: ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು: ಸಿರಿಧಾನ್ಯಗಳಲ್ಲಿ ನಾರಿನಂಶ ತುಂಬಾ ಚೆನ್ನಾಗಿರುತ್ತದೆ. ಆದ್ದರಿಂದಾಗಿ ಸಿರಿಧಾನ್ಯಗಳ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿರಲಿದೆ. ಅಲ್ಲದೆ ಸಿರಿಧಾನ್ಯಗಳಲ್ಲಿ ಪ್ರೀಬಯೋಟಿಕ್ ಅಧಿಕವಿದೆ, ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.ಮಧುಮೇಹವನ್ನು ನಿಯಂತ್ರಿಸುತ್ತದೆ
ನಮ್ಮ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಸಿರಿಧಾನ್ಯಗಳು ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಕೆಲವರು ಮಧುಮೇಹ ಬಂದ ಸಿರಿಧಾನ್ಯ ತಿಂದು ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತಾರೆ. ಮಧುಮೇಹ ಬರುವ ಮುನ್ನವೇ ಸಿರಿಧಾನ್ಯ ನಮ್ಮ ಆಹಾಕ್ರಮದಲ್ಲಿ ಇದ್ದರೆ ಈ ಮಧುಮೇಹದ ಆತಂಕವೇ ಇಲ್ಲದೆ ಬದುಕಬಹುದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಸಿರಿಧಾನ್ಯಗಳು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಆರೋಗ್ಯಕರ ಮೈ ತೂಕ ಕಾಪಾಡಲು ಸಹಕಾರಿ. ಆದ್ದರಿಂದ ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
ವಯಸ್ಸು 40 ದಾಟುತ್ತಿದ್ದಂತೆ ಬಹುತೇಕರಿಗೆ ಕೊಲೆಸ್ಟ್ರಾಲ್ ಸಮಸ್ಯೆ ಕಾಡುವುದು. ಈ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಿರಿಧಾನ್ಯಗಳ ಆಹಾರಕ್ರಮ ತುಂಬಾನೇ ಪ್ರಯೋಜನಕಾರಿ.
ಸಿರಿಧಾನ್ಯಗಳಲ್ಲಿ ಗ್ಲುಟೀನ್ ಇರುವುದಿಲ್ಲ
ಸಿರಿಧಾನ್ಯಗಳಲ್ಲಿ ಗ್ಲುಟೀನ್ ಇರುವುದಿಲ್ಲ, ಗ್ಲುಟೀನ್ ರಹಿತ ಆಹಾರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಈ ಆಹಾರ ಸೇವನೆ ಆಕ್ಸಿಡೇಟಿವ್ ಸ್ಟ್ರೆಸ್ ಕೂಡ ತಡೆಗಟ್ಟಲು ಸಹಕಾರಿಯಾಗಿದೆ.
ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ
ಸಿರಿಧಾನ್ಯಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಈ ಸಿರಿಧಾನ್ಯಗಳು ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಬೊಜ್ಜು ಮೈ ಸಮಸ್ಯೆ ಇರಲ್ಲ: ಯಾರು ಸಿರಿಧಾನ್ಯಗಳ ಆಹಾರಕ್ರಮ ಪಾಲಿಸುತ್ತಾರೋ ಅವರಿಗೆ ಮೈ ಬೊಜ್ಜು ಬರಲ್ಲ. ಗಟ್ಟಿಮುಟ್ಟಾದ ಮೈಕಟ್ಟು ಹೊಂದಿರುತ್ತಾರೆ. ಸಿರಿಧಾನ್ಯ ಸೆವಿಸುವುದರಿಂದ ನಿಮ್ಮ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು, ಆಸ್ಪತ್ರೆಗೆ ಹಣ ಹಾಕುವುದು ತಪ್ಪುತ್ತೆ.
ಸಿರಿಧಾನ್ಯಗಳ ವಿಧಗಳು
ಜೋಳ: ಇದು ಗ್ಲುಟೇನ್ ಫ್ರೀ
* ಇದನ್ನು ಬಳಸಿ ಹಲವು ರುಚಿಕರವಾದ ತಿನಿಸು ತಯಾರಿಸಬಹುದು
* ಇದರಲ್ಲಿ ನಾರಿನಂಶ ತುಂಬಾನೇ ಅಧಿಕವಿರುತ್ತದೆ.
ರಾಗಿ
* ರಾಗಿ ಕೂಡ ಅತ್ಯಂತ ಪೋಷಕಾಂಶವಿರುವ ಆಹಾರವಾಗಿದೆ.
* ರಾಗಿ ದೇಹಕ್ಕೆ ಶಕ್ತಿ ನೀಡುವುದು, ಮಧುಮೇಹ, ಕೊಲೆಸ್ಟ್ರಾಲ್ ಈ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿ.
* ಇದರಲ್ಲಿ ಕಬ್ಬಿಣದಂಶ, ಕ್ಯಾಲ್ಸಿಯಂ, ನಾರಿನಂಶ ಅಧಿಕವಿರಲಿದೆ.
ನವಣೆ ನವಣೆ ಕೂಡ ಅತ್ಯಂತ ಪೌಷ್ಠಿಕಾಂಶವಿರುವ ಆಹಾರವಾಗಿದೆ. * ಇದರಿಂದ ಉಪ್ಪಿಟ್ಟು, ಪಲಾವ್ ಮಾಡಿ ತಿಂದರೆ ರುಚಿಯಾಗಿರುತ್ತದೆ. * ಮೈ ಬೊಜ್ಜು ಕರಗಿಸಿ, ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಹೀಗೆ ಸಿರಿಧಾನ್ಯಗಳಲ್ಲಿ ಇನ್ನು ಹಲವು ವಿಧಗಳಿವೆ, ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಆರೋಗ್ಯ ವೃದ್ಧಿಸುತ್ತದೆ.