ದುಬೈ: ಇಸ್ರೇಲಿ ಬಿಲಿಯನೇರ್ ಒಡೆತನದ ಕಂಟೈನರ್ ಹಡಗಿನ ಮೇಲೆ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಮಹಾಸಾಗರದಲ್ಲಿ ಶಂಕಿತ ಇರಾನ್‌ನ ಡ್ರೋನ್‌ನಿಂದ ಈ ದಾಳಿ ನಡೆದಿದೆ ಎಂದು ಅಮೆರಿಕಾದ ರಕ್ಷಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುಪ್ತಚರ ವಿಷಯಗಳ ಬಗ್ಗೆ ಚರ್ಚಿಸಲು ಅನಾಮಧೇಯತೆಯ ಷರತ್ತಿನ ಮೇಲೆ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿದ ರಕ್ಷಣಾ ಅಧಿಕಾರಿಯೊಬ್ಬರು, ಹಿಂದೂ ಮಹಾಸಾಗರದಲ್ಲಿ ಕಂಟೈನರ್ ಹಡಗಿನ ಮೇಲೆ ದಾಳಿ ನಡೆದಿದೆ. ಶಾಹೆದ್-136 UAV ಡ್ರೋನ್‌ಗಳಿಂದ ದಾಳಿ ಮಾಡಲಾಗಿದ್ದು ಡ್ರೋನ್ ದಾಳಿಯಿಂದಾಗಿ ಹಡಗಿಗೆ ಹಾನಿಯಾಗಿದೆ. ಆದರೆ, ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದರು.
ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ದಾಳಿಯ ಹಿಂದೆ ಇರಾನ್ ಇದೆ ಎಂದು ಅಮೆರಿಕಾ ಮಿಲಿಟರಿ ಏಕೆ ನಂಬುತ್ತದೆ ಎಂಬುದನ್ನು ವಿವರಿಸಲು ಅವರು ನಿರಾಕರಿಸಿದರು.
ಫ್ರಾನ್ಸ್‌ನ ಮಾರ್ಸಿಲ್ಲೆ ಮೂಲದ ಶಿಪ್ಪಿಂಗ್ ಕಂಪನಿಯಾದ CMA CGM ಈ ವಿಷಯದ ಬಗ್ಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಆದರೆ, ಹಡಗಿನ ಸಿಬ್ಬಂದಿ ಹಡಗು ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ.
ಹಡಗಿನ ಸ್ವಯಂಚಾಲಿತ ಗುರುತಿನ ವ್ಯವಸ್ಥೆ ಟ್ರ್ಯಾಕರ್ ಮಂಗಳವಾರ (ನ. 21) ದುಬೈನ ಜೆಬೆಲ್ ಅಲಿ ಬಂದರಿನಿಂದ ಹೊರಡುವಾಗ ಆಫ್ ಆಗಿತ್ತು. ಸುರಕ್ಷತಾ ಕಾರಣಗಳಿಗಾಗಿ ಹಡಗುಗಳು ತಮ್ಮ AIS ಅನ್ನು ಸಕ್ರಿಯವಾಗಿರಿಸಿಕೊಳ್ಳಬೇಕು. ಆದರೆ ಅವರು ಗುರಿಯಾಗಿರಬಹುದು ಎಂದು ಕಂಡುಬಂದರೆ ಸಿಬ್ಬಂದಿಗಳು ಅವುಗಳನ್ನು ಆಫ್ ಮಾಡುತ್ತಾರೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರ ನೆಲೆಯಾದ ಯೆಮೆನ್ ಬಳಿಯ ಕೆಂಪು ಸಮುದ್ರದ ಮೂಲಕ ಹಾದುಹೋಗುವಾಗ ಅದು ಈ ಹಿಂದೆ ಅದೇ ರೀತಿ ಮಾಡಿತ್ತು.
SIMI ಸಿಂಗಾಪುರ ಮೂಲದ ಈಸ್ಟರ್ನ್ ಪೆಸಿಫಿಕ್ ಶಿಪ್ಪಿಂಗ್ ಒಡೆತನದಲ್ಲಿದೆ. ಇಸ್ರೇಲಿ ಬಿಲಿಯನೇರ್ ಇಡಾನ್ ಆಫರ್ ನಿಯಂತ್ರಣದ ಕಂಪನಿಯಾಗಿದೆ. ಇಸ್ರೇಲಿ ಮಿಲಿಟರಿ ಮತ್ತು ವಿಶ್ವಸಂಸ್ಥೆಗೆ ಇರಾನ್‌ನ ಮಿಷನ್ ಈ ವಿಷಯಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಹಮಾಸ್ ಉಗ್ರರು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿ ಸಾವಿರಾರು ಜನರನ್ನು ಕೊಂದಿತು. ಅನೇಕ ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡಿತು. ಇಸ್ರೇಲ್ ಕೂಡ ಪ್ರತಿಯಾಗಿ ಹಮಾಸ್ ವಿರುದ್ಧ ಯುದ್ಧ ಘೋಷಿಸಿತು. ಏತನ್ಮಧ್ಯೆ, ಹೌತಿ ಬಂಡುಕೋರರು ಯೆಮೆನ್ ಬಳಿಯ ಕೆಂಪು ಸಮುದ್ರದಲ್ಲಿ ವಾಹನ ಸಾಗಣೆ ಹಡಗನ್ನು ಅಪಹರಿಸಿದೆ.