HEALTH TIPS

ಪಿಂಚಣಿದಾರರ ವಾರ್ಷಿಕ ಮಹಾಸಭೆ

                      ಕಾಸರಗೋಡು : ಪಿಂಚಣಿದಾರರ ಸಂಘದ ಮಧೂರು ಘಟಕದ ವಾರ್ಷಿಕ ಮಹಾಸಭೆ ಕೂಡ್ಲು ಮಾರಾರ್ಜಿ ಸಭಾಭವನದಲ್ಲಿ ನಡೆಯಿತು. ಆರ್ಥಕ ಮುಗ್ಗಟ್ಟಿನ ನೆವ ತಿಳಿಸಿ ರಾಜ್ಯ ಸರಕಾರವು ಪಿಂಚಣಿದಾರರ ಪಿಂಚಣಿ ಪರಿಷ್ಕರಣೆ ಗಡು ತಡೆ ಹಿಡಿದಿರುವ, ಕ್ಷೇಮಭತ್ಯೆ ವಿತರಣೆ ನಡೆಸದೇ ಇರುವ ವಿಚಾರಗಳನ್ನು ಸಭೆ ಖಂಡಿಸಿದೆ. 

                 ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷ ವಿನೋದ್ ಮಾಸ್ಟರ್ ಪಳ್ಳಿಕುನ್ನು ಉದ್ಘಾಟಿಸಿದರು. ಎಂ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಈಶ್ವರ ರಾವ್, ಕಾರ್ಯದರ್ಶಿ ಬಲರಾಮ ಭಟ್, ಕೇಶವ ಭಟ್,ಕೆ.ನಾರಾಯಣಯ್ಯ, ನೂತನ ಕುಮಾರಿ ಮೊದಲಾದವರು ಇದ್ದರು. 

            ನೂತನ ಪದಾಧಿಕಾರಿಗಳು: ಗೌರವಾಧ್ಯಕ್ಷರು-ನಾರಾಯಣಯ್ಯ ಕೆ., ಕೆ.ಜಿ.ಶ್ಯಾನುಭೋಗ್, ಕೆ.ವಿಷ್ಣು ಭಟ್, ಅಧ್ಯಕ್ಷ-ಎಂ.ನಾರಾಯಣ, ಉಪಾಧ್ಯಕ್ಷ-ಕೆ.ಸತ್ಯನಾರಾಯಣ ತಂತ್ರಿ, ಕಾರ್ಯದರ್ಶಿ-ಬಲರಾಮ ಭಟ್ ಮಧೂರು, ಜತೆ ಕಾರ್ಯದರ್ಶಿ-ನೂತನಕುಮಾರಿ ಎಂಬವರನ್ನು ಆರಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries