ಕಾಸರಗೋಡು: ವಿದ್ಯಾನಗರದ ಚಿನ್ಮಯ ಕಾಲೋನಿ ನಿವಾಸಿಗಳ ಸಂಘ, ಕಾಸರಗೋಡು ಪೀಪಲ್ಸ್ ಫೆÇೀರಂ, ಕೃಷ್ಣಾ ಆಸ್ಪತ್ರೆಯು ಕಣ್ಣೂರು ಕ್ಯಾನ್ಸರ್ ಕೇರ್ ಸೊಸೈಟಿಯ ಸಹಯೋಗದಲ್ಲಿ ಸ್ತನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್ ರೋಗಲಕ್ಷಣಗಳ ತಪಾಸಣೆಗಾಗಿ ಉಚಿತ ಕ್ಯಾನ್ಸರ್ ತಪಾಸಣಾ ವೈದ್ಯಕೀಯ ಶಿಬಿರವನ್ನು ಆಯೋಜಿಸಿತು.
ವಿದ್ಯಾನಗರ ಕೃಷ್ಣಾ ಆಸ್ಪತ್ರೆಯಲ್ಲಿ ಜೀವನಿ ಆಯುರ್ವೇದ ಕೇಂದ್ರವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಶಾಸಕ ಸಿ.ಎಚ್.ಕುಂಜಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಣ್ಣೂರು ಮಲಬಾರ್ ಕ್ಯಾನ್ಸರ್ ಸೊಸೈಟಿಅಧ್ಯಕ್ಷ ಡಿ. ಕೃಷ್ಣನಾಥ ಪೈ, ಮೇಜರ್ ಪೆÇ್ರ.ಗೋವಿಂದನ್, ರಂಜಿತ್ ಕೆ.ನಾಯರ್, ಎಂ.ಪದ್ಮಾಕ್ಷನ್, ಕೃಷ್ಣನ್ ನಂಬೂದಿರಿ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ವಿ.ಸಿ.ರವೀಂದ್ರನ್, ಡಾ.ಟಿ.ವಿ. ಪ್ರಸಾದ್, ಡಾ. ಹರ್ಷ ಗಂಗಾಧರನ್, ಡಾ. ಶ್ವೇತಾ ಪ್ರಸಾದ್ ಕೆ ಮತ್ತು ಡಾ. ಶಾಹಿಲಾ ಸಹೀದ್ ಸುಮಾರು ಐವತ್ತು ಮಂದಿ ಮಹಿಳೆಯರು ಮತ್ತು ಮೂವತ್ತು ಪುರುಷರನ್ನು ತಪಾಸಣೆ ನಡೆಸಿದರು. ಈ ಸಂದರ್ಭ ಕ್ಯನ್ಸರ್ ಜಾಗೃತಿ ತರಗತಿಯನ್ನೂ ನಡೆಸಲಾಯಿತು.